ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಲಬೆರಕೆ, ರಾಸಾಯನಿಕ ಹಾಲು ತಡೆಗೆ ಕ್ರಮ: ಖಾದರ್

Rashmi Kasaragodu
Updated On : 26 Feb 2014, 1:04 am

ಹಾಸನ: ಕಲಬೆರಕೆ ಹಾಲು ಸರಬರಾಜು ತಡೆಗಟ್ಟುವ ನಿಟ್ಟಿನಲ್ಲಿ ಹೊರ ರಾಜ್ಯದ ರಾಸಾಯನಿಕ ಹಾಲನ್ನು ನಿಷೇಧಿಸಿಲು ಕ್ರಮ ಕೈಗೊಂಡಿದ್ದು ಹೊರ ರಾಜ್ಯದಿಂದ ರಾಜ್ಯಕ್ಕೆ ಸರಬರಾಜಗುತ್ತಿರುವ ಹಾಲನ್ನು ರಾಜ್ಯದ ಗಡಿ ಭಾಗಗಳಲ್ಲಿ ತಪಾಸಣೆ ಮಾಡಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಶಾಸಕ ಪಟೇಲ್ ಶಿವರಾಂ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಹೊರ ರಾಜ್ಯದಿಂದ 20 ಖಾಸಗಿ ಕಂಪನಿಗಳ 161 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಅದರಲ್ಲಿ 14 ಹಾಲಿನ ಮಾದರಿಗಳು ಕಳಪೆ ಗುಣಮಟ್ಟ ಹಾಗೂ ಅಸುರಕ್ಷಿತ ಎಂದು ಕಂಡು ಬಂದಿದೆ. ಆದರೆ ಯಾವುದೇ ಹಾಲಿನ ಮಾದರಿಗಳು ಕೃತಕ (ರಾಸಾಯಿನಿಕ) ಹಾಲು ಎಂದು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.
ತೊಂದರೆಗಳ ಬಗ್ಗೆ ಅರಿವು: ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ನೇಮಕಗೊಂಡಿರುವ ಆಹಾರ ಸುರಕ್ಷತಾಧಿಕಾರಿಗಳು ಸಾರ್ವಜನಿಕ ಹಾಲಿನ ಗುಣಮಟ್ಟ ಮತ್ತು ಕೃತಕ ಹಾಲಿನ ಬಳಕೆಯಿಂದ ಆರೋಗ್ಯಕ್ಕೆ ಉಂಟಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನಂದಿನಿ ಹಾಲಿನಲ್ಲಿ ಇತರೆ ಉತ್ಪನ್ನಗಳನ್ನು ತಯಾರಿಸುವ ಬದಲು ಹಾಲು ಮಾರುಕಟ್ಟೆಗೆ ಹೆಚ್ಚಿನ ಪ್ರಾದಾನ್ಯ ನೀಡಲು ಕ್ರಮ ಕೈಗೊಂಡಿದ್ದು, ಗ್ರಾಹಕರ ಅಭಿರುಚಿಗೆ ಹಾಗೂ ಅಗತ್ಯತೆ ಪೂರೈಸಲು ಹೊಸ ರೀತಿಯ ವೈವಿದ್ಯತೆಯ ಹಾಲನ್ನು ಒದಗಿಸಲಾಗುತ್ತಿದೆ. ಹೊಸ ಮಾದರಿಯ ನಂದಿನಿ ಸ್ಪೆಷಲ್ ಹಾಲು ಬಿಡುಗಡೆ ಮಾಡಲಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ಸರಬರಾಜು ಮಾಡಲು ಕಹಾಮ ಒಕ್ಕೂಟಗಳು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಬೇಡಿಕೆಗನುಗುಣವಾಗಿ ಮಾರುಕಟ್ಟೆಗೆ ಹಾಲನ್ನು ಸರಬರಾಜು ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಅರಿವು ಮೂಡಿಸಲು ಡೈರಿ ಭೇಟಿ ಕಾರ್ಯಕ್ರಮ: ಗ್ರಾಹಕರು ನಂದಿನಿ ಹಾಲು ಮತ್ತು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಡೈರಿ ಭೇಟಿ ಕಾರ್ಯಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ಟಿವಿ, ರೇಡಿಯೋ, ದಿನಪತ್ರಿಕೆಗಳಲ್ಲಿ ನಿರಂತರವಾಗಿ ಸಹಕಾರಿ ಸಂಸ್ಥೆಯ ಧ್ಯೇಯೋದ್ದೇಶಗಳು, ಹಾಲಿನ ಗುಣಮಟ್ಟ, ಹೊಸ ಉತ್ಪನ್ನಗಳ ಬಿಡುಗಡೆ ಮುಂತಾದ ವಿಷಯಗಳ ಬಗ್ಗೆ ಜಾಹೀರಾತುಗಳನ್ನು ನೀಡಿ ಗ್ರಾಹಕರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ ಎಲ್ಲಾ ಪ್ರದೇಶಗಳಲ್ಲಿಯೂ ನಂದಿನಿ ಹಾಲು ದೊರಕುವಂತೆ ಮಾಡಲು ನಂದಿನಿ ಅಧೀಕೃತ ಮಾರಾಟಗಾರರನ್ನು ನೇಮಿಸಲಾಗುತ್ತಿದೆ ಎಂದರು.
ಗ್ರಾಹಕರ ಅಭಿರುಚಿಗೆ ತಕ್ಕಂತೆ: ಹಾಲು ಮಾರಾಟಗಾರರಿಗೆ ಕಾಲ ಕಾಲಕ್ಕೆ ನೀಡುತ್ತಿರುವ ಮಾರ್ಜಿನ್ ಮೊತ್ತವನ್ನು ಹೆಚ್ಚಿಸಿ ಪರಿಷ್ಕರಿಸಿ ನಂದಿನಿ ಹಾಲನ್ನೇ ಮಾರಾಟ ಮಾಡಲು ಉತ್ತೇಜನ ನೀಡಲಾಗುತ್ತಿದೆ. ನಗರದ ಜನಬೀಡು ಪ್ರದೇಶಗಳಲ್ಲಿ ದಿನದ ಎಲ್ಲಾ ಸಮಯದಲ್ಲಿ ನಂದಿನಿ ಹಾಲು ದೊರಕುವಂತಾಗಲು ಪಾರ್ಲರ್ಗಳನ್ನು ತೆರೆಯಲಾಗುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತು ಅನುಕೂಲಕರ ದರಗಳಲ್ಲಿ ಹಾಲು ಲಭ್ಯವಿರುವಂತೆ ನೋಡಿಕೊಡಲು ನಾನಾ ಹಾಲು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ವಿಶೇಷ ಹಾಲಿನ ಬೇಡಿಕೆಗಳನ್ನು ಪೂರೈಸಲು ಹೆಚ್ಚುವರಿಯಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಹಾಲನ್ನು ಸರಬರಾಜು ಮಾಡಲು ಕ್ರಮವಿಡಲಾಗಿದೆ ಎಂದು ಸಚಿವರು ಉತ್ತರಿಸಿದರು.
ಮನೆ ಬಾಗಿಲಿನಲ್ಲಿ ಪರೀಕ್ಷೆ: ಮನೆ ಮನೆ ಭೇಟಿ ಕಾರ್ಯಕ್ರಮ ಮತ್ತು ಗ್ರಾಹಕರ ಜಾಗೃತಿ ಕಾರ್ಯಕ್ರಮಗಳಲ್ಲಿ ಕಲಬೆರೆಕೆ ಹಾಲಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಸಂಚಾರಿ ಹಾಲಿನ ಪರಿಕ್ಷಾ ವಾಹನಗಳ ಮೂಲಕ ಗ್ರಾಹಕರ ಮನೆ ಬಾಗಿಲಿನಲ್ಲಿ ಉಚಿತವಾಗಿ ಪರೀಕ್ಷಿಸಲಾಗುತ್ತಿದ್ದು, ಕಲಬೆರಕೆ ಹಾಲನ್ನು ಗುರುತಿಸಲು ಸಹಕರಿಸಲಾಗುತ್ತಿದೆ. ಕಲಬೆರಕೆ ಹಾಲು ಮಾರಾಟಗಾರರಿಗೆ ಶಿಕ್ಷೆ ವಿಧಸಲು ಈಗಾಗಲೇ ಭಾರತ ಸರ್ಕಾರವು ಪುಡ್ ಸೇಪ್ಟಿ ಮತ್ತು ಸ್ಟಾಂಡರ್ಡ್ ಕಾನೂನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಕಲಬೆರಕೆ ಹಾಲು ಮಾರಾಟ ಮತ್ತು ಉತ್ಪಾದನೆ ತಡೆಯಲು ಆರೋಗ್ಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ಡೆಸಿಗ್ನೇಟೆಡ್ ಆಫೀಸರ್ಸ್ ನೇಮಿಸಲಾಗಿದ್ದು, ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುಡ್ಸ್ ಸೇಪ್ಟಿ ಆಫೀಸರ್ಗಳು ನಿಯಮಿತವಾಗಿ ಮಾರುಕಟ್ಟೆಯಿಂದ ಕಾನೂನಿನಲ್ಲಿ ನಿಗದಿಪಡಿಸಿರುವ ವಿಧಾನದಲ್ಲಿ ಹಾಲು ಮಾದರಿಗಳನ್ನು ತೆಗೆದು ಪರೀಕ್ಷಿಸಿ ಕಲಬೆರಕೆಯಾಗಿದ್ದಲ್ಲಿ ಅವಶ್ಯ ಕಾನೂನು ಪ್ರಕ್ರಿಯೆಗಳನ್ನು ಜರುಗಿಸುತ್ತಿದ್ದಾರೆ. ಪಶು ಸಂಗೋಪನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಲಬೆರಕೆ ಹಾಲಿನ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಜರುಗಿಸಲಾಗಿದೆ ಎಂದು ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement