ತ್ಯಾಗರಾಜರ ಆರಾಧನಾ ಮಹೋತ್ಸವ
ಚನ್ನರಾಯಪಟ್ಟಣ: ಪಟ್ಟಣದ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪುರಂದರ ತ್ಯಾಗರಾಜರ ಆರಾಧನ ಮಹೋತ್ಸವ ಭಾನುವಾರ ನಡೆಯಿತು. ಶ್ರೀಮಠದ ಗುರುರಾಯರ ಧ್ಯಾನಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳನ್ನ ವಿದ್ವಾಂಸರು ಹಾಡಿದರು. ಹಾಸನದ ಸಂಗೀತ ವಿದ್ವಾಂಸರಾದ ಗಾಯತ್ರಿ, ಪಟ್ಟಣದ ಪ್ರಸನ್ನಮೂರ್ತಿ, ವಿದ್ವಾನ್ ಚ.ರಾ. ರಾಮಚಂದ್ರು, ವಿಜಯಕುಮಾರ್, ಧನಂಜಯ್, ಬೆಳ್ಳೂರಿನ ಸುಬ್ಬಲಕ್ಷ್ಮಿ, ಸ್ಯಾಕ್ಸೊಫೋನ್ ಬಾಲಕೃಷ್ಣ ಸೇರಿದಂತೆ ಅನೇಕರು ಕಾರ್ಯಕ್ರಮ ನಡೆಸಿಕೊಟ್ಟರು. ಆರಾಧನಾ ಸಮಿತಿಯ ಮುಖ್ಯಸ್ಥ ಬಸವರಾಜ್, ಲಕ್ಷ್ಮಿನರಸಿಂಹ, ಪುಟ್ಟಸ್ವಾಮಿ ಮುಂತಾದವರು ತ್ಯಾಗರಾಜರ ಹಾಗೂ ಪುರಂದರದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.