ಪೋಲಿಯೊ ಮುಕ್ತ ದೇಶ: ಸಂಭ್ರಮಾಚರಣೆ
ಹಾಸನ: ಪೋಲಿಯೊ ಮುಕ್ತ ರಾಷ್ಟ್ರಗಳ ಸಾಲಿನಲ್ಲಿ ಭಾರತ ದೇಶ ಸೇರಿರುವುದರ ಹಿನ್ನೆಲೆಯಲ್ಲಿ ತಾಲೂಕಿನ ಬೂವನಹಳ್ಳಿ ಸಮೀಪ ಬೈಪಾಸ್ ಸರ್ಕಲ್ ಬಳಿ ರೋಟರಿ ಕ್ಲಬ್ಮಿಡ್ಟೌನ್ವತಿಯಿಂದ ಕೇಕ್ ಕತ್ತರಿಸಿ ಸಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು.
ಏಳು ವರ್ಷಗಳಿಂದ ಮಕ್ಕಳಿಗೆ ಲಸಿಕೆ ಹಾಕುವಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೊ ಹಾಕುವಂತಹ ಯಶಸ್ವಿ ಕೆಲಸ ಮಾಡಲಾಗುತ್ತಿದೆ ಎಂದು ರೋಟರಿ ಮಿಡ್ಟೌನ್ ಅಧ್ಯಕ್ಷರಾದ ಸತ್ಯನಾರಾಯಣ್ ಹೇಳಿಕೊಂಡರು.
ಪಲ್ಸ್ ಪೋಲಿಯೊ ದಿನದಂದೇ ರೋಟರಿ ಮಿಡ್ಟೌನ್ ಜನ್ಮದಿನ (ಸ್ಥಾಪನೆ) ವಾಗಿರುವುದು ಎರಡು ಒಟ್ಟಾಗಿ ಸಂಭ್ರಮಿಸಿದರು. ಈ ವೇಳೆ ಛೇರ್ಮನ್ ನೀತರಾಮ್, ಸಮುದಾಯ ಸೇವಕರು ಡಾ. ವಿನೇಶ್ ಕಬ್ಲಿಗೆರೆ, ಕಾರ್ಯದರ್ಶಿ ವಿಶ್ವನಾಥ್, ಮಣಿ ಆಸ್ಪತ್ರೆಯ ಡಾ. ಯತೀಶ್ ಇತರರು ಇದ್ದರು.