ಪ್ರವೇಶ ಪರೀಕ್ಷೆಗೆ ಅರ್ಜಿ ವಿತರಣೆ
ಹೊಳೆನರಸೀಪುರ: ಪಟ್ಟಣದಲ್ಲಿರುವ ಆದರ್ಶ ವಿದ್ಯಾಲಯಕ್ಕೆ 6ನೇ ತರಗತಿಗೆ ದಾಖಲಾಗಲು ಪ್ರವೇಶ ಪರೀಕ್ಷೆಯು ಮಾ. 30ರಂದು ನಡೆಯಲಿದ್ದು, ಫೆ. 20ರಿಂದ ಆದರ್ಶ ವಿದ್ಯಾಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಯು ಹೊಳೆನರಸೀಪುರ ಶೈಕ್ಷಣಿಕ ಬ್ಲಾಕ್ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಯ್ಕೆ ಪರೀಕ್ಷೆಗೆ 3ರಿಂದ 5ನೇ ತರಗತಿಯ ಪಠ್ಯ ಪುಸ್ತಕ ಆಧರಿಸಿ ಆಂಗ್ಲ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನದ ಕುರಿತಂತೆ ಪ್ರತಿಯೊಂದು ವಿಷಯದಲ್ಲೂ ಶೇ. 20ರಷ್ಟು ಪ್ರಶ್ನೆಗಳಿರುತ್ತವೆ. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಪ್ರಶ್ನೆ ಹೊಂದಿದ್ದು, ವಿದ್ಯಾರ್ಥಿಯು ಆಂಗ್ಲ ಅಥವಾ ಕನ್ನಡ ಮಾಧ್ಯಮದಲ್ಲಿ ಉತ್ತರಿಸಬೇಕಾಗಿದ್ದು, ಒಂದೇ ಪ್ರಶ್ನೆ ಪತ್ರಿಕೆ ಇದ್ದು 100ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತದೆ. ಹೆಚ್ಚಿನ ವಿವರಗಳಿಗೆ ಆದರ್ಶ ವಿದ್ಯಾಲಯ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಿ.