ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಫುಟ್ಪಾತಲ್ಲಿದ್ದ ಅಂಗವಿಕಲನ ಅಂಗಡಿ ತೆರವು

Rashmi Kasaragodu
Updated On : 26 Feb 2014, 1:03 am

ಸಕಲೇಶಪುರ: ಫುಟ್ಪಾತ್ನಲ್ಲಿ ತರಕಾರಿ ಅಂಗಡಿ ಇಟ್ಟಿರುವ ಪುರಸಭೆ ಸದಸ್ಯರ ಅಂಗಡಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಸಮೀಪದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ಹಾಕಿದ್ದ ತರಕಾರಿ ಅಂಗಡಿಯನ್ನು ತೆರವುಗೊಳಿಸುವ ಮೂಲಕ ಪುರಸಭೆ ಹಿರಿಯ ಆಹಾರ ನಿರೀಕ್ಷಕ ಮಂಜುನಾಥ್ ಅಮಾನವೀಯಾಗಿ ವರ್ತಿಸಿದ  ಘಟನೆ ಸೋಮವಾರ ಪಟ್ಟಣದ ಹಳೇ ಬಸ್ನಿಲ್ದಾಣ ಸಮೀಪ ನಡೆಯಿತು.
ಪಟ್ಟಣದ ಹಳೇ ಬಸ್ನಿಲ್ದಾಣ ಸಮೀಪದ ಜನನಿಭಿಡ ಪ್ರದೇಶದ ಪಾದಚಾರಿ ರಸ್ತೆಯಲ್ಲಿ ಪುರಸಭೆ ಸದಸ್ಯೆ ಸುಮಿತ್ರಾ ಎಂಬುವವರು ತರಕಾರಿ ಅಂಗಡಿ ಇಟ್ಟಿದ್ದು, ಈ ಅಂಗಡಿಯ ಎದುರಿನ ಮತ್ತೊಂದು ಪದಾಚಾರಿ ರಸ್ತೆಯಲ್ಲಿ ಅಂಗವಿಕಲ ಯುವಕ ತರಕಾರಿ ಅಂಗಡಿ ಇಟ್ಟಿದ್ದರು. ಇದರಿಂದಾಗಿ ಪುರಸಭೆ ಸದಸ್ಯೆಯ ಅಂಗಡಿಯ ವೈವಾಟು ಕುಸಿತಕಂಡಿದೆ ಎಂಬ ದೃಷ್ಟಿಯಿಂದ ಸೋಮವಾರ ಏಕಾಏಕಿ ಹಿರಿಯ ಆಹಾರ ನಿರೀಕ್ಷಕ ಮಂಜನಾಥ್ ನೇತೃತ್ವದಲ್ಲಿ ಕಾರ್ಯಚರಣೆಗೆ ಇಳಿದ ಪುರಸಭ ಸಿಬ್ಬಂದಿ ಅಂಗವಿಕಲ ವ್ಯಕ್ತಿಯ ಸುಮಾರು 7 ಸಾವಿರ ಬೆಲೆ ಬಾಳುವ ತರಕಾರಿಯನ್ನು ಟ್ರ್ಯಾಕ್ಟರ್ಗೆ ತುಂಬಿದರು.
ಈ  ವೇಳೆ ಸ್ಥಳದಲ್ಲಿದ್ದ ಕಾರು, ಆಟೋಚಾಲಕರು ಸೇರಿದಂತೆ ನೂರಾರು ಸಾರ್ವಜನಿಕರು ಪುರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. ಅಲ್ಲದೆ ಪಾದಚಾರಿ ರಸ್ತೆಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವುದಾದರೆ ಪುರಸಭೆ ಸದಸ್ಯೆಯ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ವಿಚಲಿತಗೊಂಡ ಸಿಬ್ಬಂದಿ ವಶಕ್ಕೆ ಪಡೆದಿದ್ದ ತರಕಾರಿಯನ್ನು ವಾಪಸ್ ಮಾಡಿದರಾದರೂ ಅಂಗವಿಕಲನಿಗೆ ಮತ್ತೆ ತರಕಾರಿ ಅಂಗಡಿ ಹಾಕದಂತೆ ನಿರ್ದೇಶನ ನೀಡಿ ಸ್ಥಳದಿಂದ ತೆರಳಿದರು.


ಯಾವ ಉದ್ದೇಶವೂ ಇಲ್ಲ
ಹಳೇಬಸ್ ನಿಲ್ದಾಣ ಸಮೀಪದಲ್ಲಿ ತರಕಾರಿ ಅಂಗಡಿ ಇಡದಂತೆ ಈ ವ್ಯಕ್ತಿಗೆ ನಿರ್ದೇಶನ ನೀಡಲಾಗಿದೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ.
ಟಿ ಮಂಜುನಾಥ್, ಹಿರಿಯ ಆಹಾರ ನಿರೀಕ್ಷಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement