ಅಪರಿಚಿತ ವ್ಯಕ್ತಿ ಶವ ಪತ್ತೆ
ಹಾಸನ: ನಗರದ ಕಟ್ಟಿನ ಕೆರೆ ಮಾರುಕಟ್ಟೆಯ ಜನತಾ ಬಜಾರ್ ಹತ್ತಿರ ಇತ್ತೀಚೆಗೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯು ಸುಮಾರು 50-60 ವರ್ಷದವರಾಗಿದ್ದು, ಕೆಂಪು ಮಾಸಲು ಕಪ್ಪು ಚೌಕಳಿಯ ಶರ್ಟ್, ನೀಲಿ ಕಪ್ಪು ಬಿಳುಪು ಲುಂಗಿ, ಕಪ್ಪು ನಿಕ್ಕರ್ ಧರಿಸಿದ್ದಾರೆ. 165 ಸೆಂ.ಮೀ. ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಮಾನ್ಯ ಶರೀರ ಕಪ್ಪು-ಬಿಳಿ ಕೂದಲು ಇದೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಹಾಸನ ಎಸ್.ಪಿ. ಅವರ ದೂ. 08172-268410 ಅಥವಾ ನಗರ ಪೊಲೀಸ್ ಠಾಣೆಯ ದೂ. 08172-268333 ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಕೋರಿದ್ದಾರೆ.