ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕ್ರೀಡೆಗಳಲ್ಲಿ ಭಾರತ ಚಿನ್ನ ಗಳಿಸಲಿ: ಡಿಡಿಪಿಐ ಬಸವರಾಜ್

Rashmi Kasaragodu
Updated On : 27 Feb 2014, 1:17 am

ಹಾಸನ: ಕ್ರೀಡೆಗಳಲ್ಲಿ ಭಾರತ ಕೇವಲ ಬೆಳ್ಳಿ ಪದಕ ಪಡೆಯುವಲ್ಲಿಯೇ ತೃಪ್ತಿ ಪಡುವಂತಾಗಿದ್ದು, ಅದು ಚಿನ್ನ ಗಳಿಸುವಂತಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಡ್ ಹೇಳಿದರು.
ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳ ಅಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ಶಿಕ್ಷಕರ ಕಾರ್ಯಾಗಾರ, ನೇತಾಜಿ ಸುಭಾಷ್ ಚಂದ್ರಬೋಸರ 117ನೇ ಜನ್ಮದಿನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೌಢ ಶಿಕ್ಷಣದ ದೈಹಿಕ ಶಿಕ್ಷಣದಲ್ಲಿ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡುವ ನಿಟ್ಟಿನಲ್ಲಿ ಅವಶ್ಯಕತೆಯನ್ನು ಪೂರೈಸಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ 2013-14ನೇ ಸಾಲಿನಲ್ಲಿ ಕ್ರೀಡೆ ಒಳಗೆ ಸಾಧನೆ ಗೈದ ಮಕ್ಕಳಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ವೇಳೆ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ್, ಜಿಲ್ಲಾ ವಿದ್ಯಾಧಿಕಾರಿ ಡಿ.ಟಿ. ಪುಟ್ಟರಾಜ್, ಶಿಕ್ಷಣಾಧಿಕಾರಿ ರವಿಕುಮಾರ್, ವಿದ್ಯಾಧಿಕಾರಿ ಲತಾ, ಸಂಪನ್ಮೂಲ ವ್ಯಕ್ತಿ ವಿರೂಪಾಕ್ಷ, ರಾಜ್ಯ ದೈಹಿಕ ಶಿಕ್ಷಣ ಸಂಘದ ಅಶೋಕ್, ನಿವೃತ್ತ ಶಿಕ್ಷಕರಾದ ಕರೀಗೌಡ, ವಿಜಯಕುಮಾರ್, ಗೋಪಾಲಕೃಷ್ಣ ಹಾಗೂ ಪ್ರಾಥಮಿಕ ಶಿಕ್ಷಣ ಸಂಘದ ಶಿವೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement