ಶನಿದೇವರ ಮಹೋತ್ಸವ ಇಂದು
ಹಾಸನ: ತಾಲೂಕಿನ ದೊಡ್ಡಪುರ ಗೇಟ್ ಬಳಿ ರಾಮೇಶ್ವರ ನಗರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.27 ರಂದು ಶನೇಶ್ವರಸ್ವಾಮಿ, ಮುನೇಶ್ವರಸ್ವಾಮಿ, ಮುಳ್ಳಕಟ್ಟೆ ಅಮ್ಮ ಮತ್ತು ಹಟ್ಟಿ ಮಾರಿಯಮ್ಮನ ಉತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರಾತ್ರಿ 8ಕ್ಕೆ ಗ್ರಾಮಸ್ಥರಿಂದ ಶನಿದೇವರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಂತರ ಅನ್ನಸಂತರ್ಪಣೆ, ಪೂಜೆ ಮತ್ತು ಹೋಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಡೊಳ್ಳುಕುಣಿತ, ರಸಮಂಜರಿ ಕಾರ್ಯಕ್ರಮವನ್ನು ಅರಸೀಕೆರೆಯ ನಾಟ್ಯಂಜಲಿ ನೃತ್ಯವಂೃದವರಿಂದ ಏರ್ಪಡಿಸಲಾಗಿದೆ. ಫೆ.28 ರಂದು ಬೆಳಗ್ಗೆ 7ಕ್ಕೆ ಕೆಂಡ ಹಾಯುವ ಕಾರ್ಯಕ್ರಮವಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.