ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಭಿವೃದ್ಧಿ ಕ್ಷೇತ್ರದಲ್ಲಿ ಗ್ರಾಪಂ ಪಾತ್ರ ಮುಖ್ಯ

Rashmi Kasaragodu
Updated On : 28 Feb 2014, 1:02 am

ಅರಸೀಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾತ್ರಿ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳ ಅನುಷ್ಟಾನಕ್ಕೆ ಗ್ರಾಪಂ ಸಾರ್ವಜನಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಬಹುಮುಖ್ಯ ಪಾತ್ರ ವಹಿಸಲು ತಾಪಂ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ ಅಭಿಪ್ರಾಯಪಟ್ಟರು.
  ತಾಲೂಕಿನ ಹಬ್ಬನಘಟ್ಟ ಗ್ರಾಪಂ 2013-14ನೇ ಸಾಲಿನ ಗ್ರಾಮಸಭೆಯಲ್ಲಿ ಮಾತನಾಡಿ, ಎನ್‌ಎರ್‌ಇಜಿಎ ಯೋಜನೆಯಡಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ರೈತರ ಸುಧಾರಣೆ ಮಾಡಲು ಅವಕಾಶ ಮಾಡಲಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ತಡೆದು, ಕೃಷಿ ನಿರ್ಮಾಣ ಮಾಡುವುದರಿಂದ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಮಣ್ಣನ್ನು ತಡೆಗಟ್ಟಬಹುದಲ್ಲದೆ ಅಂತರ್ಜಲ ವೃದ್ಧಿಸಿ ತೇವಾಂಶ ಲಭ್ಯವಾಗುವುದರಿಂದ ಬೆಳೆಗೆ ಅನುಕೂಲವಾಗಲಿದೆ ಎಂದರು.
ದಿನಕ್ಕೆ 174 ರು.ನಂತೆ 100ದಿನ ಕೆಲಸ: ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಂಡರೆ ಜಾಬ್ ಕಾರ್ಡ್, ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡರೆ 10ಸಾವಿರ ನೀಡಲು ಅವಕಾಶವಿದ್ದು, 1 ವರ್ಷದಲ್ಲಿ ಜಾಬ್ ಕಾರ್ಡ್ ಇರುವ ಕುಟುಂಬಕ್ಕೆ ದಿನಕ್ಕೆ 174 ನಂತೆ 100ದಿನ ಕೆಲಸ ನೀಡಲಾಗುವುದು. ಇದರಿಂದ ಆ ಕುಟುಂಬಕ್ಕೆ 17400 ಕೂಲಿ ದೊರೆದಂತಾಗುತ್ತದೆಯಲ್ಲದೆ ಅವರ ಜಮೀನಿನಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿ ಎಂದು ಹೇಳಿದರು.
ಎಸ್‌ಸಿ, ಎಸ್‌ಟಿಗೆ 15 ಸಾವಿರ: ಗ್ರಾಮೀಣ ಪ್ರದೇಶದಲ್ಲಿ ಬಯಲು ಮಲಮೂತ್ರ ವಿಸರ್ಜನೆಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಗ್ರಾಪಂಗೆ 200 ಶೌಚಾಲಯಗಳನ್ನು ನಿರ್ಮಾಣ ಮಾಡಲು ಗುರಿ ನೀಡಲಾಗಿದ್ದು, ಸಾಮಾನ್ಯ ವರ್ಗಕ್ಕೆ 10 ಸಾವಿರ, ಎಸ್‌ಸಿ, ಎಸ್‌ಟಿಗೆ 15 ಸಾವಿರ  ನೀಡಲಾಗುವುದು ಎಂದು ವಿವರಿಸಿದರು.
  ತೋಟಗಾರಿಕಾ ಬೆಳೆಗಳಿಗೆ ಸಹಾಯಧನ ನೀಡಲು ಅವಕಾಶವಿದೆ. ಪ್ರತಿ ಗ್ರಾಪಂಗೆ ವಸತಿ ಹೀನರಿಗಾಗಿ 20 ಮನೆಗಳನ್ನು ನೀಡಲಾಗುತ್ತಿದ್ದು, ಆ ಪೈಕಿ 10 ಸಾಮಾನ್ಯ, 10 ಎಸ್‌ಸಿ, ಎಸ್‌ಟಿಗೆ ಮನೆಗಳನ್ನು ನೀಡಲಾಗುವುದು. ವಸತಿ ಹೀನರ ಸಂಖ್ಯೆ ಹೆಚ್ಚಾಗಿರುವುದರಿಂದ ಇದನ್ನು ಪ್ರತಿ ಗ್ರಾಪಂಗೆ 40ಕ್ಕೆ ಏರಿಸಬೇಕೆಂದು ಸರ್ಕಾರವನ್ನು ತಾಪಂ ಸಭೆಗಳಲ್ಲಿ ಒತ್ತಾಯಿಸಿದ್ದು, ಈವರೆಗೆ ಯಾವುದೇ ಉತ್ತರ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು. ಸುರೇಶ್, ಪ್ರಕಾಶ್, ಕುಮಾರಸ್ವಾಮಿ, ಕನಕಂಚೇನಹಳ್ಳಿ, ಪ್ರಸನ್ನಕುಮಾರ್,ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement