ಬಿಸಿಲೆ ಅರಣ್ಯದಲ್ಲಿ ಮುಂದುವರಿದ ಕೂಂಬಿಂಗ್
ಸಕಲೇಶಪುರ: ತಾಲೂಕಿನ ಬಿಸಿಲೆ ಅರಣ್ಯದಲ್ಲಿ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆ ಮೂರನೇ ದಿನವಾದ ಗುರುವಾರವೂ ಮುಂದುವರಿಯಿತು. ಬಿಸಿಲೆ ಸಮೀಪದ ಮಸನಗುಡ್ಡ, ವಡ್ಡಬಾರೆ, ಕಿರಣಕೂಡಿಬೆಟ್ಟ, ನಾಟಿಕಲ್ಲು, ಅಂಚಿನಮನೆ, ಗಡಿ, ಸೊಂಟೊಕೊಲುಗುಡ್ಡ, ಮಾವಿನೂರು, ಕುರುಕಿಮನೆ, ಜಾಗಟ, ಹೊಂಗಡಹಳ್ಳ ಅರಣ್ಯದಲ್ಲಿ 6 ತಂಡಗಳಾಗಿ ಶೋಧ ಕಾರ್ಯಾಚರಣೆ ನಡೆಸಿದ ನಿಗ್ರಹ ಪಡೆಗೆ ಯಾವುದೇ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಕಾರ್ಯಚರಣೆ ಸ್ಥಗಿತಗೊಳಿಸಲಾಯಿತು.