ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಕ್ತದಾನದಿಂದ ಜೀವ ಉಳಿಸಿ: ಸತ್ಯಪ್ರಮೋದ್

Rashmi Kasaragodu
Updated On : 28 Feb 2014, 1:04 am

ಹಾಸನ: ಅಮೂಲ್ಯವಾದ ರಕ್ತ ನೀಡುವ ಮೂಲಕ ಮತ್ತೊಬ್ಬರ ಜೀವ ಉಳಿಸಲು ಮುಂದಾಗಬೇಕೆಂದು ಅಮೋಘ  ಬ್ರಾಡ್‌ಬ್ಯಾಂಡ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಕೆ.ಪಿ. ಸತ್ಯಪ್ರಮೋದ್ ಕರೆ ನೀಡಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಗಳವಾರ ಸೇವಾ ಭಾರತಿ ಆಶ್ರಯದಲ್ಲಿ ಗುರೂಜಿ ಜನ್ಮ ದಿನದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲಾ ದಾನಕ್ಕಿಂತ ರಕ್ತದಾನ ಶ್ರೇಷ್ಟವಾದುದ್ದು. ರಕ್ತ ನೀಡಿದ ಮೂರು ತಿಂಗಳಲ್ಲಿಯೇ ಪುನಃ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಸಲಹೆ ನೀಡಿದರು. ಪ್ರಾಂತ ಪ್ರಚಾರ ಪ್ರಮುಖ ಮಾತನಾಡಿ, ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ನೆನಪಿಸಿಕೊಳ್ಳುವುದು, ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸೇವಾ ಭಾರತಿ ಸ್ವಯಂ ಸೇವಕರು ಸ್ವಯಂ ಪ್ರೇರಿತ ರಕ್ತವನ್ನು ನೀಡುವುದರ ಮೂಲಕ ಮತ್ತೊಬ್ಬರಿಗೆ ದಾರಿ ದೀಪವಾದರು. ಇದೆ ವೇಳೆ ಸೇವಾ ಭಾರತಿಯ ನಗರ ಸಂಘ ಸಂಚಾಲಕರು, ಇತರರು ಇದ್ದರು.
'ಪರಂಪರೆ ದೇಶದ ಸಂಸ್ಕೃತಿ ಪ್ರತೀಕ'
ಹೊಳೆನರಸೀಪುರ: ಪರಂಪರೆ ಎಂಬುದು ಒಂದು ದೇಶದ ಸದೃಢ ಸಂಸ್ಕೃತಿಯ ಜೀವಂತಿಕೆಯ ಪ್ರತೀಕವಾಗಿದ್ದು, ಪರಂಪರೆಗಳು ಆಯಾ ದೇಶದ ಸಂಸ್ಕೃತಿಯು ಬೆಳೆದು ಬಂದ ಮಾರ್ಗವನ್ನು ನಿರ್ದೇಶಿಸುತ್ತದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ. ಇರ್ಷಾದ್ ಅಭಿಪ್ರಾಯಪಟ್ಟರು. ಕಾಲೇಜಿನ ವತಿಯಿಂದ ತಾಲೂಕಿನ ಅರೇಕಲ್ಲು ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಅಮೂರ್ತ ಪರಂಪರೆಯ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ಅಮೂರ್ತ ಪರಂಪರೆಯ ಜಾಗೃತಿಯ ಬಗ್ಗೆ ಹೊಸಳ್ಳಿ ಗ್ರಾಮಸ್ಥರನ್ನು ಉದ್ದೇಶಿಸಿ ಅಗೋಚರವಾಗಿರುವ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕ ಹಾಗೂ ಎನ್‌ಎಸ್‌ಎಸ್ ಶಿಬಿರಾಧಿಕಾರಿ ಇ. ಮಧುಸೂದನ್ ಅರೇಕಲ್ಲು ಹೊಸಹಳ್ಳಿಯ ಮುಖಂಡರು ಇದ್ದರು.
ಸಿಎಚ್‌ಆರ್‌ಡಿ: ಶ್ರಾವ್ಯ 20ನೇ ರ್ಯಾಂಕ್
ಹಾಸನ: ಕೇಂದ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆ- 2013ರ
ಜೂನಿಯರ್
ಹಂತದ ಪರೀಕ್ಷೆಯಲ್ಲಿ ನಗರದ ರಾಮಕೃಷ್ಣ ವಿದ್ಯಾಲಯದ 3ನೇತರಗತಿ ವಿದ್ಯಾರ್ಥಿನಿ ಎಂ.ಕೆ. ಶ್ರಾವ್ಯ 20ನೇ ರ್ಯಾಂಕ್ ಪಡೆದು ಮೆರಿಟ್ ಸ್ಕಾಲರ್ಸ್‌ಶಿಪ್‌ಗೆ ಅರ್ಹಳಾಗಿದ್ದಾಳೆ. ರಾಜ್ಯಕ್ಕೆ 20ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಪ್ರಾಂಶುಪಾಲ ಸಿ.ಎಸ್.ಕೃಷ್ಣಸ್ವಾಮಿ ಹಾಗೂ ಆಡಳಿತದ ಮಂಡಳಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement