ಸೀಮೆ ಹಸು ಪಾಲನೆಯಿಂದ ಹೆಚ್ಚು ಲಾಭ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಮುಕ್ಕಾಲು ಎಕರೆ ಜಾಗದಲ್ಲಿ ಕೊಟ್ಟಿಗೆ ನಿರ್ಮಿಸಿ ಸೀಮೆ ಹಸುಗಳನ್ನು ಸಾಕುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಅಕ್ಷಯ ಕಲ್ಪ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಎನ್.ಎಸ್, ರೆಡ್ಡಿ ತಿಳಿಸಿದರು.
ಇಲ್ಲಿಗೆ ಸಮೀಪದ ಬಳ್ಳೆಕೆರೆ ಬಜಗೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಕೃಷಿ ಉತ್ಸವದಲ್ಲಿ ಪಶು ಸಂಗೋಪನೆ ಶ್ವಾನಾ ಪ್ರದರ್ಶನದ ಲಾಭದಾಯಕ ಹೈನುಗಾರಿಕೆ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದುಬಾರಿ ಬೆಲೆಯ ಇಂಡಿ ಬೂಸ ಹಾಕಿ 350- 400 ಕೆ.ಜಿ. ತೂಕ ಇರುವ ಸೀಮೆ ಹಸುಗಳು ಭಾರದ ಒತ್ತಡದಿಂದ ಓಡಾಡಲು ಸಣ್ಣ ಕೊಟ್ಟಿಗೆಗಳು ಸಕಾಗುವುದಿಲ್ಲ. ಮೂಗುದಾರ ಹಾಕದೆ ಇರುವ ಹಸುಗಳಿಗೆ ಹಸಿ ಹುಲ್ಲು ಒಣ ಹುಲ್ಲು ಹಾಕಿ ಚೆನ್ನಾಗಿ ಮೆಲುಕು ಹಾಕುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ನಿರ್ದೇಶಕ ಗಂಗಾಧರ್, ಮಾಜಿ ನಿರ್ದೇಶಕ ಪ್ರತಾಪ್ ಸಿಂಗ್, ಡಾ. ಜಯಪ್ಪ, ರಮೇಶ್, ವಂಸತ್, ಶಶಿಧರ್, ಯೋಜನಾಧಿಕಾರಿ ಪಿ.ಶ್ರೀನಿವಾಸ್, ಎಸ್. ಶಿವಣ್ಣ, ನಂದಿತ, ರವೀಶ್, ಶಿವಕುಮಾರಸ್ವಾಮಿ, ಶಶಿಕಿರಣ್ ಇದ್ದರು