ಕೊಬ್ಬರಿ ಹುಟ್ಟುವಳಿ ಮಾರಾಟಕ್ಕೆ ಅಗತ್ಯ ದಾಖಲೆಗಳ ವಿವರ
ಹಾಸನ: ಕೃಷಿ ಮಾರಾಟ ನೀತಿ 2013 ರನ್ವಯ ತುಮಕೂರು, ತಿಪಟೂರು, ಅರಸೀಕೆರೆ ಕೊಬ್ಬರಿ ಮಾರುಕಟ್ಟೆಗಳು ಏಕೀಕೃತ ಮಾರುಕಟ್ಟೆಯಾಗಿದೆ. ಆದ್ದರಿಂದ ಸ್ಪರ್ಧಾತ್ಮಕ ಧಾರಣೆಗಾಗಿ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೊಬ್ಬರಿ ಉತ್ಪನ್ನ ಮಾರಾಟ ಮಾಡುವಂತಹ ರೈತರಿಗೆ ತಿಳಿಯಪಡಿಸುವುದೇನೆಂದರೆ, ಕೊಬ್ಬರಿ ಹುಟ್ಟುವಳಿ ಮಾರಾಟವನ್ನು ವಿದ್ಯುನ್ಮಾನ ಮಾರಾಟ ಪದ್ಧತಿಯಲ್ಲಿ ಅಳವಡಿಸಿರುವುದರಿಂದ ತಮ್ಮ ಹುಟ್ಟುವಳಿ ಮಾರಾಟ ಪೂರ್ವದಲ್ಲಿ ಅಥವಾ ಮಾರಾಟಕ್ಕಾಗಿ ಉತ್ಪನ್ನವನ್ನು ಪ್ರಾಂಗಣಕ್ಕೆ ತಂದಾಗ ಸಮಿತಿಯ ಪ್ರಾಂಗಣದ ಪ್ರವೇಶ ದ್ವಾರದಲ್ಲಿ ಈ ಕೆಳಕಂಡ ದಾಖಲೆಗಳನ್ನು ಒದಗಿಸಿ ನೋಂದಣಿ ಮಾಡಿಸಿಕೊಳ್ಳಬೇಕಾಗಿ ಕೋರಲಾಗಿದೆ.
ರೈತರು ಒದಗಿಸಬೇಕಾದ ದಾಖಲಾತಿಗಳು: ಎರಡು ಪಾಸ್ಪೋಟ್ ಸೈಜ್ನ ಭಾವಚಿತ್ರಗಳು, ಚುನಾವಣೆ ಗುರುತಿನ ಚೀಟಿ, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ. ದೂರವಾಣಿ ಸಂಖ್ಯೆ ಒದಗಿಸಬೇಕೆಂದು ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಕೋರಿದ್ದಾರೆ.