ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೋಮಾಳ ಒತ್ತುವರಿ ಮಾಡದಂತೆ ಆಗ್ರಹ

Rashmi Kasaragodu
Updated On : 1 Mar 2014, 12:28 pm

ಆಲೂರು: ತಾಲೂಕಿನ ಕಸಬಾ ಹೋಬಳಿ ಬಸವಾಪುರದಲ್ಲಿ ಗೋಮಾಳವನ್ನು ಕೆಲವು ವ್ಯಕ್ತಿಗಳು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು ಅದಕ್ಕೆ ಅವಕಾಶ ಕೊಡಬಾರದೆಂದು ಒತ್ತಾಯಿಸಿ ಶುಕ್ರವಾರ ಬಸವಾಪುರ ಹಾಗೂ ಹೊಸಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಾಸಕ ಎಚ್.ಕೆ. ಕುಮಾರಸ್ವಾಮಿ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಬಸವಾಪುರಕ್ಕೆ ಸೇರಿದ ಸರ್ವೆ ನಂ.49 ರಲ್ಲಿ 7.12 ಎಕರೆ ಸರ್ಕಾರಿ ಗೋಮಾಳವಿದ್ದು, ಅದನ್ನು ಕಳೆದ 50 ವರ್ಷಗಳಿಂದ ಗ್ರಾಮಸ್ಥರು ಸಾರ್ವಜನಿಕವಾಗಿ ಬಳಸುತ್ತಿದ್ದು, ಈ ಮಧ್ಯೆ ನಮ್ಮ ಗ್ರಾಮದವರೇ ಆದ ತಿಮ್ಮರಾಯ ಗೌಡ, ನಾಗರಾಜ, ರಾಮಚಂದ್ರ, ದಾಸೇಗೌಡ, ರಂಗೇಗೌಡ ಎಂಬುವರು ಅಕ್ರಮವಾಗಿ ಸ್ವಾಧೀನ ಹೊಂದಲು ಪ್ರಯತ್ನಿಸುತ್ತಿದ್ದು, ಒಂದು ವೇಳೆ ಸದರಿಯವರು ಸ್ವಾಧೀನ ಹೊಂದಿದ್ದಲ್ಲಿ ನಮ್ಮ ರಾಸುಗಳಿಗೆ ಮೇವು ಇಲ್ಲದಂತಾಗುತ್ತದೆ. ಮಕ್ಕಳಿಗೆ ಆಟದ ಮೈದಾನ ಇಲ್ಲದಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಾವುಗಳು ಯಾರಿಗೂ ಈ ಗೋಮಾಳವನ್ನು ಖಾತೆ ಮಾಡದಂತೆ ತಡೆದು ಸಾರ್ವಜನಿಕರಿಗೆ ಗೋಮಾಳವನ್ನು ಉಳಿಸಿಕೊಡಬೇಕೆಂದು ತಹಸೀಲ್ದಾರ್‌ಗೂ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಶಾಸಕರು ಗೋಮಾಳ ಸಾರ್ವಜನಿಕರ ಅನುಕೂಲಕ್ಕಾಗಿ ಇದ್ದು, ಇದನ್ನು ಖಾತೆ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಒಂದು ವೇಳೆ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಸಂಬಂಧವಾಗಿ ಸೂಕ್ತ ಕ್ರಮಕೈಗೊಳ್ಳಲು ಉಪವಿಭಾಗಾಧಿಕಾರಿ, ತಹಸೀಲ್ದಾರ್‌ರವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಮಮತ, ಯಶೋಧಮ್ಮ, ರತ್ನಮ್ಮ, ಭಾಗ್ಯ, ರೀನಾ, ಜಯಲಕ್ಷ್ಮಿ, ಹೆಚ್.ಟಿ. ಮಲ್ಲೇಶ, ಪದ್ಮ, ಮಂಜೇಗೌಡ, ಸರಸ್ವತಿ, ರೂಪ, ಶಿವಮ್ಮ, ಕವಿತ, ಜಯಮ್ಮ, ಸುಶೀಲ, ನಾಗಮಣಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement