ಜಾವಗಲ್ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ತಿಮ್ಮೇಗೌಡ ಆಯ್ಕೆ
ಜಾವಗಲ್: ಜಾವಗಲ್ ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎನ್. ತಿಮ್ಮೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಜೆ.ಟಿ. ಮಂಜುನಾಥ ಶೆಟ್ಟಿ ರಾಜಿನಾಮೆ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದು ತಿಮ್ಮೇಗೌಡ ಮಾತ್ರ ನಾಮ ಸಲ್ಲಿಸಿದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದಾರೆಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಘೋಷಿಸಿದರು. ಮಾಜಿ ಅಧ್ಯಕ್ಷರಾದ ಜೆ.ಟಿ. ಮಂಜುನಾಥ ಶೆಟ್ಟಿ, ಟೈಲರ್ ಪಾಪಣ್ಣ, ಕೃಷ್ಣಶೆಟ್ಟಿ, ತಮ್ಮಣ್ಣಗೌಡ, ರಾಮಕೃಷ್ಣ, ಗೋವಿಂದೆಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಾಪೇಗೌಡ, ಡೈರಿ ಅಧ್ಯಕ್ಷ ಜೆ.ಡಿ. ಪ್ರಕಾಶ ಸಂಘದ ನಿರ್ದೇಶಕ ವೆಂಕಟೇಶ್, ಗಿರಿಗೌಡ, ಜೆ.ಎಸ್. ಕಾಂತರಾಜು ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.