ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ
ಹಾಸನ: ತಾಲೂಕು ಪಂಚಾಯ್ತಿ ಅಧ್ಯಕ್ಷೆ ಡಿ. ರತ್ನ ಹನುಮೇಗೌಡ ಅವರು ಅಧ್ಯಕ್ಷಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ಪ್ರಕರಣ 140ರಂತೆ ನಿಗದಿತ ಅವಧಿಯಲ್ಲಿ ಇವರು ರಾಜಿನಾಮೆ ವಾಪಸ್ಸು ಪಡೆಯದ ಕಾರಣ ಅವರ ರಾಜಿನಾಮೆ ಅಂಗೀಕರಿಸಿದೆ. ಇದರಿಂದಾಗಿ ತೆರವಾದ ಈ ಅಧ್ಯಕ್ಷ ಸ್ಥಾನಕ್ಕೆ ಹಾಸನ ಉಪವಿಭಾಗಾಧಿಕಾರಿಯವರಿಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.