ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಭ್ರಮ, ಸಡಗರದ ಕನ್ನಡ ಜಾತ್ರೆ...

Rashmi Kasaragodu
Updated On : 28 Feb 2014, 11:39 am

ಹಾಸನ: ಹಾಸನ ನಗರದಲ್ಲಿ ಶುಕ್ರವಾರ ಹಬ್ಬದ ಸಡಗರ, ಸಂಭ್ರಮ ಮೇಳೈಸಿತ್ತು. ಎಲ್ಲೆಲ್ಲೂ ರಾಜಾಜಿಸಿದ ಕನ್ನಡದ ಬಾವುಟಗಳು.. ಜನಪರ ಮತ್ತಿತರ ಕಲಾತಂಡಗಳ ಮೆರವಣಿಗೆ ಮತ್ತಷ್ಟು ಮೆರಗನ್ನು ನೀಡಿದ್ದವು. ರಾಜ ಬೀದಿಗಳಲ್ಲಿ ಮೆರೆದ ಕನ್ನಡಾಂಬೆಯ ಭಾವಚಿತ್ರ ಇದ್ದ ಕನ್ನಡದ ತೇರು.. ಕನ್ನಡ ಸೂರ್ಯನ ಕಾವು ಏರುತ್ತಿರುವುದನ್ನು ಲೆಕ್ಕಿಸದರೇ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಕನ್ನಡಾಂಬೆಯ ಘೋಷಣೆ ಕೂಗುತ್ತಾ ಮರೆದ ಕನ್ನಡತನ..
ಹೀಗೆ ಶುಕ್ರವಾರ ಹಾಸನ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 14ನೇ ಸಮ್ಮೇಳನವು ವಿಜೃಂಭಣೆಯಿಂದ ಜರುಗಿತು. ಮೆರವಣೆಗೆಯಲ್ಲಿ ಭಾಗಹಿಸಿದ್ದ ಕಲಾ ತಂಡಗಳು ಜನಮನ ಸೂರೆಗೊಂಡಿತು.
ನಲ್ಲೂರುಗೆ ಮೈಸೂರು ಪೇಟ: ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಮ್ಮ ಜಿಲ್ಲೆಯವರೇ ಆದ ಜಿಲ್ಲಾ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಅವರಿಗೆ ಮೈಸೂರು ಪೇಟ ಧರಿಸಿ ಹಾರ ಹಾಕುವ ಮೂಲಕ ಮೆರವಣಿಗೆಗೆ ಅಧಿಕೃತವಾಗಿ ಚಾಲನೆಯನ್ನು ನೀಡಿ, ಸಮ್ಮೇಳನಾಧ್ಯಕ್ಷರಿಗೆ ಶುಭಕೋರುವ ಮೂಲಕ ಸನ್ಮಾನಿಸಿದ ಅವರು ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಸಮ್ಮೇಳನಾಧ್ಯಕ್ಷರಿಗೆ ನಮಸ್ಕಾರ: ನಂತರ ಹೋರಟ ಕನ್ನಡತನ ಮರೆಸುವ ಮೆರವಣಿಗೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್, ಸಮ್ಮೇಳನಾಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್‌ರನ್ನು ಸಾರೋಟ್ ಮೇಲೆ ಕುಳ್ಳಿರಿಸಿದರು. ನಂತರ ಮೆರವಣಿಗೆಯ ಸಂದರ್ಭದಲ್ಲಿ ನೆರೆದಿದ್ದ ಸಾಹಿತ್ಯಾಭಿಮಾನಿಗಳು, ಸಾರ್ವನಿಕರು, ಕನ್ನಡಾಭಿಮಾನಿಗಳು ಸಮ್ಮೇಳನಾಧ್ಯಕ್ಷರಿಗೆ ಕೈಮುಗಿದು ನಮಸ್ಕರಿಸಿದರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಉಪೇಂದ್ರ ಪ್ರತಾಪ್ ಸಿಂಗ್ ಅವರು ಸಮ್ಮೇನಾಧ್ಯಕ್ಷ ಮೆರವಣಿಗೆಗೆ ಕನ್ನಡ ಧ್ವಜವನ್ನು ಹಿಡಿಯುವ ಮೂಲಕ ಚಾಲನೆ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಿಂದ ಆರಂಭಗೊಂಡ ಮೆರವಣಿಗೆ ಬಿ.ಎಂ.ರಸ್ತೆ, ಶಂಕರಮಠ, ರಾಜೀವ್ ಆಸ್ಪತ್ರೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ ರಸ್ತೆ, ಆರ್.ಸಿ.ರಸ್ತೆ, ಜಿಪಂ ಮುಖಾಂತರ ಬಿ.ಎಂ.ರಸ್ತೆ, ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತದ ಮೂಲಕ ಎಸ್.ಕೆ. ಕರೀಂ ಖಾನ್ ಮಹಾಮಂಟಪ ಮತ್ತು ಕೆ. ಸಣ್ಣೇಗೌಡ ಮಹಾವೇದಿಕೆಗೆ ಕರೆ ತರಲಾಯಿತು.
ಸಂಸ್ಕೃತಿಕ ಕಾರ್ಯಕ್ರಮಗಳು: ನಗರದ ರಾಜಾ ಬೀದಿಗಳಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸೋಮನ ಕುಣಿ, ಕರಗ ಕುಣಿ, ಚಿಟ್ಟಿಮೇಳ, ವೀರಗಾಸೆ, ಪುರುಷರ ಕೋಲಾಟ, ನಾಸಿಕ್ ಡೋಲ್, ತಮಟೆ ವಾದನ, ಗಾರುಡಿ ಗೊಂಬೆ, ಯಕ್ಷಗಾನ ವೇಷಧಾರಿಗಳು, ಕನ್ನಡಾಂಬೆಯ ಭಾವಚಿತ್ರವುಳ್ಳ ಕನ್ನಡದ ತೇರು ಸೇರಿದಂತೆ ನಾನಾ ಕಲಾತಂಡಗಳ ಮೆರವಣಿಗೆಯು ಜನಮನ ಸೂರೆಗೊಂಡಿತು. ಮೇರವಣಿಗೆಯ ಸಂದರ್ಭದಲ್ಲಿ ನಗರದ ಎವಿಕೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪೂರ್ಣ ಕುಂಭ ಕಳಸ ಹಿಡಿದು ಮುನ್ನೆಡೆದಿದ್ದು ಆಕರ್ಷಣೀಯವಾಗಿತ್ತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂರ್ತಪ್ಪ, ಹೊಯ್ಸಳ ಸಿರಿ ಗೌರವ ಸಂಪಾದಕ ಡಾ. ಎಚ್.ಎಲ್. ಮಲ್ಲೇಶ್‌ಗೌಡ, ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸಿ.ಕೆ. ಹರೀಶ್, ಗೊರೂರು ಶಿವೇಶ್ ಮೆರವಣಿಗೆ ಸಮಿತಿ ಅಧ್ಯಕ್ಷ ಡಾ.ವೈ.ಎಸ್.ವೀರಭದ್ರಪ್ಪ, ನೂರಾರು ಸಾಹಿತ್ಯಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಮುನ್ನ ನಗರದ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಶಾಂತ ಬಾಗಡೆ ಮತ್ತು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಜೊತೆಯಾಗಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜನಾರ್ದನ್ ಮತ್ತು ಸಮ್ಮೇಳನಾಧ್ಯಕ್ಷ ಜೊತೆಯಾಗಿ ಪರಿಷತ್ ಧ್ವಜಾರೋಹಣ ಮಾಡಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement