ಸಮುದ್ರವಳ್ಳಿ: ಬೀದಿ ನಾಟಕೋತ್ಸವಕ್ಕೆ ಚಾಲನೆ
ಹಾಸನ: ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿ ಇಲಾಖೆ ಮತ್ತು ಹಾಸನದ ಬೀದಿ ನಾಟಕ ಕಲಾ ತಂಡದ ಆಶ್ರಯದಲ್ಲಿ ತಾಲೂಕಿನ ಸಮುದ್ರವಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬೀದಿ ನಾಟಕೋತ್ಸವಕ್ಕೆ ಪತ್ರಕರ್ತ ಉದಯ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ, ನಾಟಕಗಳನ್ನು ಸರ್ಕಾರದ ಅನುದಾನದಲ್ಲಿ ನಡೆಸುವುದು ಕಲಾ ಪ್ರೇಮಿಗಳನ್ನು ಪ್ರೋತ್ಸಾಹಿಸುವುದು ಉತ್ತಮ ಎಂದು ತಿಳಿಸಿದರು. ನಿರಂತರವಾಗಿ ಬೀದಿನಾಟಕ ಕಲಾ ತಂಡ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ನೈರ್ಮಲ್ಯ, ಕೋಮು ಸೌಹಾರ್ದತೆಯ ಬಗ್ಗೆ ಹೆಚ್ಚು ಪ್ರದರ್ಶನಗಳನ್ನು ನೀಡಬೇಕು. ನಾಟಕವೂ ಸೇರಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಗೀತ, ನಾಟಕಗಳು ಮುಖ್ಯವಾಗುತ್ತವೆ. ನೃತ್ಯ ಕಲಾ ಪ್ರಕಾರಗಳನ್ನು ಮನುಷ್ಯನಲ್ಲಿ ಸೌಜನ್ಯತೆ, ಸೃಜನಶೀಲತೆಯನ್ನು ಬೆಳೆಸವುದಲ್ಲದೆ ಚಿಂತನೆ, ವಿವೇಚನೆ ಸೌಹಾರ್ದತೆ ಬೆಳೆಸುತ್ತದೆ ಎಂದು ಹೇಳಿದರು. ಪತ್ರಕರ್ತ ಸತೀಶ್, ವಾರ್ತಾಧಿಕಾರಿ ವಿನೋದ್ ಚಂದ್ರ ಮತ್ತು ಎನ್ಎಸ್ಎಸ್ ಅಧಿಕಾರಿ ಮಹೇಶ್ ಇದ್ದರು.