ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಯ್ಸಳೋತ್ಸವದ ವೈಭವ ಮರು ಕಳಿಸಲಿ

Rashmi Kasaragodu
Updated On : 1 Mar 2014, 12:19 pm

ಹಾಸನ: ನಾಡಿನಲ್ಲಿ ನಡೆಯುವ ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಕದಂಬ ಉತ್ಸವ ಮುಂತಾದವುಗಳ ಮಾದರಿಯಲ್ಲೇ  ಹಾಸನದಲ್ಲಿ ಹೊಯ್ಸಳ ಉತ್ಸವವು ರೂಢಿಗೆ ಬಂತು. ಆರಂಭದ ವರ್ಷಗಳಲ್ಲಿ ಅಪರಿಮಿತ ಉತ್ಸಾಹದಿಂದ  ಸಂಭ್ರಮಿಸುತ್ತಿದ್ದ ಹೊಯ್ಸಳ ಉತ್ಸವವು ಕಳೆದ ಹತ್ತಾರು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ ಎಂದು  ಸಮ್ಮೇಳನಾಧ್ಯಕ್ಷ ಡಾ. ನಲ್ಲೂರು ಪ್ರಸಾದ್ ವಿಷಾದಿಸಿದರು. ಈ ಬಗ್ಗೆ ರಾಜಕಾರಣಿಗಳು ಚಕಾರ ಎತ್ತುತ್ತಿಲ್ಲ ಮತ್ತೆ ಹೊಯ್ಸಳ ಉತ್ಸವ ಹಿಂದಿನ ವೈಭವದೊಂದಿಗೆ ಮರುಕಳಿಸಬೇಕಿದೆ. ಇದಕ್ಕೆ ನಾವೆಲ್ಲಾ ಒಂದುಗೂಡಬೇಕಿದೆ ಎಂದು ಶುಕ್ರವಾರ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಡಾ. ನಲ್ಲೂರು ಪ್ರಸಾದ್ ಆಗ್ರಹಿಸಿದರು. ಹಾಸನ ಜಿಲ್ಲೆಯ ಕಲಾವಿದರು ಇಂದು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ. ಅವರ ಕಲೆಯನ್ನು ಕೇಳುವವರಿಲ್ಲದಂತಾಗಿದೆ. ಪ್ರೋತ್ಸಾಹವಿಲ್ಲದೆ ಸೊರಗುತ್ತಿರುವ ಕಲೆಗಳನ್ನು ಮತ್ತೆ ಪುನರುತ್ಥಾನಗೊಳಿಸಬೇಕಾಗಿದೆ. ಆನೆ, ಚಿರತೆ ಮುಂತಾದ ಕಾಡು ಪ್ರಾಣಿಗಳ ಉಪಟಳ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ರೈತರ ಬೆಳೆ ನಾಶವಾಗಿ ಅವರ ಬದುಕು ಸಂಕಷ್ಟಕ್ಕೀಡಾಗಿದೆ. ಸರ್ಕಾರ ಈ ತೊಂದರೆಯನ್ನು ಹೋಗಲಾಡಿಸಿ ಗ್ರಾಮೀಣ ಜನರು ನೆಮ್ಮದಿಯಿಂದ  ಬದಕಲು ಸಹಕಾರಿ ಎಂದರು. ಅಸ್ಪೃಶ್ಯತೆಯ ಮಹಾಪಿಡುಗನ್ನು ಹೋಗಲಾಡಿಸಿ ಜಾತಿ ಕಲಹವನ್ನು ಬಿಟ್ಟು ಮನುಷ್ಯ ಜಾತಿ ತಾನೊಂದೆ ವಲಂ ಎಂಬಂತೆ, ನಮ್ಮ ಜನರು ಬದುಕಿ ಬಾಳಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement