ಹ್ಯಾಂಡ್ ಪೋಸ್ಟ್ ಬೈಪಾಸ್ ರಸ್ತೆ ಅಪಘಾತ ತಡೆಗೆ ಕ್ರಮ
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75 ರ ಬರಗೂರು ಹ್ಯಾಂಡ್ ಪೋಸ್ಟ್ ಬೈಪಾಸ್ ರಸ್ತೆಯಲ್ಲಾಗುತ್ತಿರುವ ಅಪಘಾತ ತಡೆಗೆ ಪ್ಲೈಓವರ್ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆ ನಿರ್ಮಿಸುವ ಸಂಬಂಧ ಲೋಕೋಪಯೋಗಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಿಧಾನ ಪರಿಷತ್ನಲ್ಲಿ ನಿಯಮ 330 ರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯು ಬೆಂಗಳೂರನ್ನು ಮಂಗಳೂರಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಈ ರಸ್ತೆಯು ಕಿ.ಮಿ. 139.67 ರಿಂದ 148.824 ರವರೆಗೆ ಚನ್ನರಾಯಪಟ್ಟಣ ನಗರಕ್ಕೆ ಬೈಪಾಸ್ ರಸ್ತೆಯನ್ನು ಎರಡು ಪಥ ಮತ್ತು ಪೇವ್ಡ್ ಶೋಲ್ಡರ್ ಹೊಂದಿರುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಿಸಿರುತ್ತಾರೆ. ಸದರಿ ಬೈಪಾಸ್ ರಸ್ತೆಯು 9.147 ಕಿ.ಮಿ ಇರುತ್ತದೆಂದು ತಿಳಿಸಿದರು.
ಸದರಿ ಬೈಪಾಸ್ ರಸ್ತೆಯಲ್ಲಿ ಕಿ.ಮಿ 143.50 ರಲ್ಲಿ ರಾಜ್ಯ ಹೆದ್ದಾರಿಯಾದ ನುಗ್ಗೆಹಳ್ಳಿಯಿಂದ ಚನ್ನರಾಯಪಟ್ಟಣ ರಸ್ತೆ ಮತ್ತು ಕಿ.ಮಿ 149.60 ರಲ್ಲಿ ಅರಸೀಕೆರೆ ಚನ್ನರಾಯಪಟ್ಟಣ ರಸ್ತೆಯನ್ನು ಸಂಧಿಸುತ್ತದೆ. ಈ ರಸ್ತೆಯಲ್ಲಿ ರಂಬಲ್ ಸ್ಟ್ರೀಪ್ಸ್ಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ರಸ್ತೆಯಲ್ಲಿ ದಿನಾಂಕ 01-04-2013 ರಿಂದ 26-01-2014 ರವರೆಗೆ 7 ಅಪಘಾತಗಳು ಸಂಬವಿಸಿದ್ದು 5 ಜನ ಗಾಯಗೊಂಡಿದ್ದು ಒಟ್ಟು 8 ಜನ ಮೃತಪಟ್ಟಿರುತ್ತಾರೆಂದು ತಿಳಿಸಿದರು. ಸದರಿ ಎರಡು ಜಂಕ್ಸ್ನ್ಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೊಳಪಟ್ಟಿರುವುದರಿಂದ ದಿನಾಂಕ 13-02-2014 ರಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಸಭೆ ನಡೆಸಲಾಗಿ ಅರಸೀಕೆರೆ ಜಂಕ್ಸ್ನ್, ಬಾಗೂರು ರಸ್ತೆ, ಬಂಡಿಹಳ್ಳಿ ಜಂಕ್ಷ್ನ್ಗಳಲ್ಲಿ ಪ್ರತ್ಯೇಕ ಜಿಟಣ್ಟಢಜ್ಠಣ ್ಡಟಿಜಜ್ಠ ಠಛಡಡ ಮಾಡಲು ಒಪ್ಪಿ ಕೊಂಡಿರುತ್ತಾರೆ ಹಾಗೂ ಚನ್ನರಾಯಪಟ್ಟಣ ಬೈಪಾಸ್ ಪರಿಮಿತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಪ್ರಾಧಿಕಾರದವರು ಒಪ್ಪಿರುತ್ತಾರೆಂದು ಸಚಿವರು ತಿಳಿಸಿದರು.