ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಗಲಿದ ರಾಷ್ಟ್ರಕವಿಗೆ ಗೀತ ನಮನ

Mainashree
Updated On : 1 Jan 2014, 11:02 am

ಹೊಳೆನರಸೀಪುರ: ಕನ್ನಡ ಸಾರಸ್ವತ ಲೋಕದಿಂದ ಇತ್ತೀಚೆಗಷ್ಟೇ ಮರೆಯಾದ ಹಣತೆಯ ಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಸ್ಮರಣಾರ್ಥವಾಗಿ ತಾಲೂಕು ಕಸಾಪ ಹಾಗೂ ನಾನಾ ಸಂಘಸಂಸ್ಥೆಗಳು ಜತೆಗೂಡಿ ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಮಂಗಳವಾರ ರಾಷ್ಟ್ರಕವಿಗಳ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟವು.
ಉದ್ಯಾನವನದಲ್ಲಿನ ಬಯಲು ಮಂಟಪದಲ್ಲಿ ರಾಷ್ಟ್ರಕವಿಗಳಾದ ಕುವೆಂಪು ಹಾಗೂ ಶಿವರುದ್ರಪ್ಪ ಅವರಿಂದ ರಚಿತವಾಗಿರುವ ಗೀತೆಗಳಿಗೆ ಕಿರಿಯರು, ಹಿರಿಯರೆನ್ನದೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ವೇದಿಕೆ ನೀಡಲಾಯಿತು.
ಶಿಕ್ಷಕ ಕೆ.ಶಿವಕುಮಾರಾಚಾರಿ, ಕೆ.ಎಲ್.ದಿವಾಕರ್, ಡಿ.ಪಿ.ಕಾವ್ಯ, ಶಿಕ್ಷಕಿ ಕಮಲಮ್ಮ, ಯಶಸ್ಗೌಡ, ನಿತೀಶ್ನೇರಳೆ, ಪಿ.ಚನ್ನರಾಯಿ, ರೋಟರಿ ಅಧ್ಯಕ್ಷರಾದ ರೊ.ಆರ್.ಬಿ.ಪುಟ್ಟೇಗೌಡ, ಎಂ.ವಿ.ಸತ್ಯನಾರಾಯಣ, ಪ್ರಾಂಶುಪಾಲ ಮಲ್ಲಕಾರ್ಜುನ ಸ್ವಾಮಿ, ಯುವ ಪ್ರತಿಭೆ ಸುಬ್ರಹ್ಮಣ್ಯ ಮೊದಲಾದವರುಗಳು ಕವಿ ಗೀತೆಗಳಿಗೆ ದನಿಯಾದರು.
ತಾಲೂಕು ಕಸಾಪ, ತಾಲೂಕು ಸರ್ಕಾರಿ ನೌಕರರ ಸಂಘ, ರೋಟರಿ ಸಂಸ್ಥೆ, ಭಾರತೀಯ ರೆಡ್ಕ್ರಾಸ್ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಜಾನಪದ ಪರಿಷತ್, ತಾಲೂಕು ಚುಸಾಪ ಪುರಸಭೆಯ ಸಹಕಾರದೊಂದಿಗೆ ಸಂಘಟಿಸಿದ್ದವು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ, ತಾಲೂಕಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ, ಪ್ರತಿಭೆಗಳಿಗೆ ಇರುವ ಸೂಕ್ತ ವೇದಿಕೆಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹಳ್ಳಿಮೈಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎಸ್.ಪ್ರಭುಶಂಕರ್ ಮಾತನಾಡಿ, ಒಳ್ಳೆಯ ಕಾರ್ಯಗಳಿಗೆ ಎಂದಿಗೂ ಮನ್ನಣೆ ಇರುತ್ತದೆ ಎನ್ನುವುದಕ್ಕೆ ಈ ಗೀತ ನಮನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು. ರೆಡ್ಕ್ರಾಸ್ ಸಂಸ್ಥೆಯ ಡಾ.ಕೆ.ಸಿ.ಮರಿಯಪ್ಪ, ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಾ.ರಾ.ಸುಬ್ಬರಾಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ತಾ.ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮ ಮಂಜುನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement