ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೃಹರಕ್ಷಕ ದಳದ ಸೇವೆ ಗಣನೀಯ: ತಹಸೀಲ್ದಾರ್

Mainashree
Updated On : 1 Jan 2014, 11:02 am

ಹೊಳೆನರಸೀಪುರ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ ಉತ್ತಮ ಸೇವೆ ನೀಡುತ್ತಿರುವವರಲ್ಲಿ ಗೃಹರಕ್ಷಕ ದಳ ಮೊದಲ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ಹೇಳಿದ್ದಾರೆ.
ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಗೃಹರಕ್ಷಕ ದಳ ಬಹಳಷ್ಟು ಉತ್ತಮ ಕೆಲಸ ನಿರ್ವಹಿಸಿ ಪೊಲೀಸ್ರಷ್ಟೆ ದಕ್ಷತೆಯಿಂದ ಸೇವೆ ನೀಡುತ್ತಿರುವುದು ಸಂತಸದ ವಿಷಯವಾಗಿದೆ.  ನಗರಠಾಣೆ ಪಿಎಸ್ಐ ಶಿವಕುಮಾರ್ ಮಾತನಾಡಿ, ಪೋಲಿಸ್ ಇಲಾಖೆ ಮತ್ತು ಗೃಹ ರಕ್ಷಕ ದಳ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗೃಹರಕ್ಷಕ ದಳ ನಮ್ಮ ಇಲಾಖೆಯೊಂದಿಗೆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೈಜೋಡಿಸಿದ್ದರ ಫಲದಿಂದ ಸಾಕಷ್ಟು ಫಲಶೃತಿ ಕಾಣಲು ಸಾಧ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಎಂ.ಎ.ಸತೀಶ್ ಮಾತನಾಡಿ, ನಮ್ಮ ಸಂಸ್ಥೆ ಪ್ರಸ್ತುತ ರಾಜ್ಯದಲ್ಲಿ 25 ಸಾವಿರ ಸಂಖ್ಯೆಯಲ್ಲಿದ್ದು ಜಿಲ್ಲೆಯಲ್ಲಿ ಸುಮಾರು 1150 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.  ನಮ್ಮ ಸೇವೆಯನ್ನು ಪರಿಗಣಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವು ಪ್ರಶಸ್ತಿ ನೀಡಿದ್ದು ಸಮಾಜದಲ್ಲಿ ಹೊಣೆಯನ್ನು ಹೆಚ್ಚಿಸಿದೆ ಎಂದರು. ಪಟ್ಟಣದ ಸ್ವಾಮಿ ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ಎಂ.ಎಂ.ಎ ರೆಹಮಾನ್ ಮಾತನಾಡಿ, ತಾಲೂಕಿನಲ್ಲಿನ ಗೃಹರಕ್ಷಕ ದಳ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ನಮ್ಮ ಹೊಳೆನರಸೀಪುರ ಗೃಹ ರಕ್ಷಕ ದಳ ಪಡೆದುಕೊಳ್ಳಲು ಸಾಧ್ಯವಾಗಿದೆ. ಆದ್ದರಿಂದ ಈ ಪದಕಗಳು ಬೇರೆಯವರಿಗೆ ಸ್ಪೂರ್ತಿದಾಯಕವಾಗಲಿ ಎಂದು ಹಾರೈಸಿದರು. ಸಮಾರಂಭ ಆರಂಭವಾಗುತ್ತಿದ್ದಂತೆ ಜಿಲ್ಲಾ ಕಮಾಂಡೆಂಟ್ ಎಂ.ಎನ್.ವೈ. ಹೆಗ್ಗಡೆ ಅವರು ಪ್ರಮಾಣವಚನ ಬೋಧಿಸಿದರು. ತಾಲೂಕಿನ ಗೃಹರಕ್ಷಕ ದಳದ ಅಧಿಕಾರಿ ಎಚ್.ಆರ್.ಪ್ರದೀಪ್ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement