ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಆಯ್ಕೆ
ಆಲೂರು: ತಾಲೂಕು ಮಡಿವಾಳ ಸಂಘದ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಎ.ಎಸ್.ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಎ.ಎಸ್.ಈಶ್ವರ, ಕಾರ್ಯದರ್ಶಿಯಾಗಿ ರವೀಶ, ಕಾರ್ಯಾಧ್ಯಕ್ಷ- ವೀರಭದ್ರಶೆಟ್ಟರು, ಉಪಾಧ್ಯಕ್ಷರಾಗಿ ಮುತ್ತಣ್ಣ, ನಂಜಶೆಟ್ಟಿ, ಅಣ್ಣಪ್ಪ ಶೆಟ್ಟಿ, ಮಲ್ಲೇಶ್ವರ, ಖಜಾಂಜಿ - ಮೋಹನ್‌ಕುಮಾರ್, ವೀರಭದ್ರಶೆಟ್ಟಿ, ಸಹ ಕಾರ್ಯದರ್ಶಿ- ನಿಂಗಪ್ಪ, ಪ್ರಕಾಶ, ಸಂಘಟನಾ ಕಾರ್ಯದರ್ಶಿ- ರಘು, ಸಂಚಾಲಕ - ರಂಗಣ್ಣ, ನಿರ್ದೇಶಕರಾಗಿ ರಾಜಶೆಟ್ಟಿ, ಬೈರಶೆಟ್ಟಿ ಆಯ್ಕೆಯಾದರು.
ನಗರ ಘಟಕ ಅಧ್ಯಕ್ಷರಾಗಿ ಪುಟ್ಟರಾಜು, ಗೌರವ ಅಧ್ಯಕ್ಷರಾಗಿ ವಿರೂಪಾಕ್ಷ, ಉಪಾಧ್ಯಕ್ಷರಾಗಿ ಶಾಂತರಾಜು, ಕಾರ್ಯಾಧ್ಯಕ್ಷರಾಗಿ ಯುವರಾಜು, ಕಾರ್ಯದರ್ಶಿ- ವಿಶ್ವನಾಥ್, ಸಹ ಕಾರ್ಯದರ್ಶಿ- ಮಂಜುನಾಥ ಆಯ್ಕೆಯಾದರು. ಜ.5ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಡಿವಾಳರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿರ್ಮಾನಿಸಲಾಯಿತು.