ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಅಧಿಕಾರಿಗಳಿಗೆ ವಾಕಿಟಾಕಿ ವಿತರಣೆ

Mainashree
Updated On : 1 Jan 2014, 8:57 am

ಬೇಲೂರು: ಪುರಸಭೆ ಕಾರ್ಯಾಲಯದಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಡಾ. ಮಧುಕೇಶ್ವರ್ ಬೇಲೂರು ಪುರಸಭೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವಾಕಿಟಾಕಿ ವಿತರಿಸಿದರು.
ನಂತರ ಮಾತನಾಡಿ, ಇಲಾಖೆಯ ಕೆಲಸ ಕಾರ್ಯಗಳು ಸುಗಮವಾಗಿ ಹಾಗೂ ತುರ್ತಾಗಿ ನಿರ್ವಹಿಸಲು ಅನುಕೂಲವಾಗಲೆಂದು ವಾಕಿಟಾಕಿ ವಿತರಿಸಲಾಗಿದೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಗೆ ಸೇರಿದ ಐಡಿಎಂಸಿ ಕಾಂಪ್ಲೆಕ್ಸ್‌ನ ಬಾಡಿಗೆ ಹಣ ಪಾವತಿಗೆ ಜನವರಿ 15ರವರೆಗೆ ಗಡುವು ನೀಡಲಾಗಿದೆ. ಆದಷ್ಟು ಬೇಗ ಬಾಡಿಗೆದಾರರು ಬಾಕಿ ಹಣವನ್ನು ಪಾವತಿಸಬೇಕಾಗಿ ಸೂಚಿಸಿದರು.
ಸೋಮವಾರ ನಡೆಯುವ ವಾರದ ಸಂತೆಯು ರಸ್ತೆ ಬದಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಶಾಲಾ ಮಕ್ಕಳಿಗೆ ಹಾಗೂ ವಾಹನ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿರುವುದು ಕಂಡು ಬಂದಿದ್ದು ಆದಷ್ಟು ಬೇಗ ಸ್ಥಳೀಯ ಶಾಸಕರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಕಂಡು ಈ ಸಮಸ್ಯೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement