ಬಾಲಕಿ ಮೇಲೆ ಅತ್ಯಾಚಾರ
ಸಕಲೇಶಪುರ: ಬಾಲಕಿಯೊಬ್ಬಳ ಮೇಲೆ ಅಕ್ಕನ ಗಂಡನೇ ಅತ್ಯಾಚಾರವೆಸಗಿರುವ ಘಟನೆ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುಶಾಲನಗರ ಬಡಾವಣೆಯ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಕ್ಕನ ಪತಿ ಮೋಹನ್ರಾಜ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬೇಲೂರು ತಾಲೂಕು ಅರೇಹಳ್ಳಿಯ ಬಾಲಕಿ ಕಳೆದೆರಡು ತಿಂಗಳ ಹಿಂದೆ ತನ್ನ ಅಕ್ಕನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ದುಷ್ಕೃತ್ಯ ನಡೆಸಿದ್ದಾನೆ. ಬಾಲಕಿ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಪರಿಣಾಮ ಘಟನೆ ಬಹಿರಂಗಗೊಂಡಿದೆ. ದೂರು ದಾಖಲಾಗಿದೆ.