ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈವಿಧ್ಯ ವಿಷಯಗಳಿಗೆ ಕನ್ನಡಿ 'ಸಿಂಧೂ' ಕವನ ಸಂಕಲನ

Mainashree
Updated On : 1 Jan 2014, 8:57 am

ಆಲೂರು: ಸಿಂಧೂ ನದಿ ದಡದಲ್ಲಿ ಉಜ್ವಲ ನಾಗರಿಕತೆ ಮೆರೆದು ಮಾತೃಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಜನರ ವೈಭವದ ಸೂಚಕವೇ ಸಿಂಧೂ ಕವನ ಸಂಕಲನದ ಶೀರ್ಷಿಕೆಯಾಗಿದೆ ಎಂದು ಪ್ರೊ.ಡಿ.ಕೆ. ಮಂಜಯ್ಯ ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಬಿ.ಗುರುಮೂರ್ತಿಯವರ 'ಸಿಂಧೂ' ಕವನ ಸಂಕಲನ ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಂಧೂ ಕವನ ಸಂಕಲನದಲ್ಲಿ ಬರುವ ಕವನಗಳು ಶೋಷಿತ ಸಮಾಜದ ಜನರ ನೋವು ನಲಿವುಗಳನ್ನು ವ್ಯಕ್ತಪಡಿಸುತ್ತವೆ. ವೈವಿಧ್ಯಮಯ ವಿಷಯಗಳನ್ನು ಇಲ್ಲಿನ ಕವಿತೆಗಳು ಹೊಂದಿದ್ದು, ಸಾಮಾಜಿಕ ಎಚ್ಚರ ಮತ್ತು ವೈಚಾರಿಕ ನಿಲುವಿನಿಂದ ಪ್ರಗತಿ ಪರ ಚಿಂತನೆಗೆ ಒಳಪಡಿಸುತ್ತವೆ. ಮನುಷ್ಯನ ಸ್ವಾರ್ಥದಿಂದ ಕಾಡು ನಾಡಾಗಿ ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡುವ ಹಾಗೂ ಮೂಢನಂಬಿಕೆಯಿಂದ ಸಮಾಜದ ಕೆಳ ಸಮುದಾಯಗಳು ನರಳುವಂತೆ ಅಕ್ಷರಸ್ಥ ಸವರ್ಣೀಯ ವರ್ಗ ಮಾಡಿರುವ ವಿಡಂಬನೆಯಿದೆ ಎಂದರು.
ಆಲೂರು ತಾಲೂಕು ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್ ಮಾತನಾಡಿ, ಸಿಂಧೂ ಕವನ ಸಂಕಲನ ಸಮಾಜಮುಖಿಯಾಗಿದೆ ಎಂದರು. ನಿವೃತ್ತ ಅಧಿಕಾರಿ ವೆಂಕಟಯ್ಯ, ಹಿಂದುಳಿದ ವರ್ಗದ ಒಕ್ಕೂಟದ ಅಧ್ಯಕ್ಷ ಗೋಪಿ, ದಸಂಸ ಸಂಚಾಲಕ ದೇವರಾಜು, ರಘು, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಸ್ವಾಮಿ, ಬಸವರಾಜು, ಲಲಿತಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement