ಸಮಾಜದ ಡೊಂಕು ತಿದ್ದುವಲ್ಲಿ ಪತ್ರಿಕೆ ಪಾತ್ರ ಪ್ರಮುಖ
ಆಲೂರು: ಪತ್ರಿಕೆಗಳು ಸಮಾಜದ ಒಳಿತು ಕೆಡುಕು, ಅಂಕು-ಡೊಂಕುಗಳನ್ನು ಬಿಂಬಿಸಿ ಅವುಗಳನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ತಿಳಿಸಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತಾನಾಡಿ, ದೃಶ್ಯ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪತ್ರಿಕೆಗಳಲ್ಲಿ ಸುದ್ದಿಗಳು ಸವಿಸ್ತಾರವಾಗಿರುತ್ತವೆ. ಇವು ಪರಿಣಾಮಕಾರಿ ಕೆಲಸ ಮಾಡುತ್ತವೆ ಎಂದರು.
ರೈತಾಪಿ ವರ್ಗ, ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮನಸ್ಸು ಮಾಡಿದರೆ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಮಾನವ ಹಾಗೂ ಕಾಡಾನೆಗಳ ಸಂಘರ್ಷವನ್ನು ತಪ್ಪಿಸಬಹುದು ಎಂದರು.
ನಂತರ ವಿದ್ಯಾರ್ಥಿಗಳು ತಾಲೂಕಿನ ರೈತ ಸಮಸ್ಯೆ, ಶೈಕ್ಷಣಿಕ ಸಮಸ್ಯೆ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳ ಬಗ್ಗೆ ಉತ್ತರಿಸುತ್ತಾ ಕಳೆದ 40 ವರ್ಷಗಳಿಂದಲೂ ಜಾರಿ ಆಗದೆ ಉಳಿದಿದ್ದ, ಲೋಕ್ಪಾಲ್ ಮಸೂದೆ, ಅಣ್ಣಾ ಹಜಾರೆ ಎಂಬ ಹೋರಾಟಗಾರ ಸತ್ಯಾಗ್ರಹವೆಂಬ ಅಸ್ತ್ರದಿಂದ ಕೇವಲ 2 ವರ್ಷಗಳಲ್ಲಿ ಜಾರಿಯಾಗುವಂತೆ ಮಾಡಿದರು. ವಿದ್ಯಾರ್ಥಿಗಳು ರೈತರು ಹಾಗೂ ಸಮಾಜದ ಎಲ್ಲ ವರ್ಗದ ಜನತೆ ಒಗ್ಗೂಡಿ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದರೆ ಪರಿಹಾರ ಕಷ್ಟವಲ್ಲ ಎಂದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ. ಪತ್ರಕರ್ತರು ಮನಸ್ಸು ಮಾಡಿದರೆ ಸಮಾಜದ ನ್ಯೂನತೆಗಳನ್ನು ತಿದ್ದಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬಲ್ಲರು. ತಾಲೂಕು ಪತ್ರಕರ್ತರ ಬಹುದಿನಗಳ ಬೇಡಿಕೆಯಾದ ಪತ್ರಕರ್ತರ ಭವನ ನಿರ್ಮಾಣಕ್ಕೆ ನಿವೇಶನವನ್ನು ಶೀಘ್ರ ನೀಡುವ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದರು.
ಜಿಲ್ಲಾ ಅಧ್ಯಕ್ಷೆ ಲೀಲಾವತಿ, ತಹಸೀಲ್ದಾರ್ ಶಾರದಾಂಬ, ಪತ್ರಕರ್ತರಾದ ಮದನಗೌಡ, ಜೆ.ಆರ್.ಕೇಂಚೇಗೌಡ, ರವಿ ನಾಕಲಗೂಡು ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ, ದೃಶ್ಯ ಮಾಧ್ಯಮಗಳಿಂದ ಸಮಾಜದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮ ಹಾಗೂ ಪತ್ರಕರ್ತರ ಕೆಲಸ, ಅವರ ಸಮಸ್ಯೆಗಳನ್ನು ವಿವರವಾಗಿ ತಿಳಿಸಿದರು.
ಜಿಲ್ಲಾ ಸಂಘದ ಕಾರ್ಯದರ್ಶಿ, ವಿಜಯಕುಮಾರ್, ಕಸಾಪ ಅಧ್ಯಕ್ಷ ಗುಲಾಂ ಸತ್ತರ್, ಕಲಾವಿದ ಹಳೆ ಆಲೂರು ನಾಗರಾಜ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಸದಸ್ಯರಾದ ಎಸ್.ಸಿ.ಕಾಂತರಾಜು, ಕೆ.ಕಾಂತರಾಜು, ಪಪಂ ಮುಖ್ಯಾಧಿಕಾರಿ ವಾಸುದೇವ, ಎಇಇ ಶಿವಕುಮಾರಪ್ಪ, ಆರ್ಎಫ್ಒ ದೇವರಾಜು, ಬಿಆರ್ಸಿ ರವಿಕುಮಾರ್, ಕೆ.ಎಸ್.ಮಂಜೇಗೌಡ, ಎಚ್.ವಿ.ಶಿವರಾಮೇಗೌಡ, ಎಚ್.ಬಿ. ಧರ್ಮರಾಜ್, ಶಾಂತಕೃಷ್ಣ, ಜಯರಾಂ, ಎಂ.ಬಿ.ವಿಜಯಕಾಂತ, ಬಸವರಾಜ್, ವರದರಾಜು ಹನುಮಂತೇಗೌಡ, ಕಬೀರ್, ಸುರೇಶ್, ಪೃಥ್ವಿ, ಚಂದ್ರ ಪ್ರಸಾದ್ ಇತರರು ಇದ್ದರು. ನಟರಾಜ್ ಅರಕಲಗೂಡು ನಿರೂಪಿಸಿದರು. ಆದಿಲ್ ಸ್ವಾಗತಿಸಿದರು. ಪ್ರದೀಪ ವಂದಿಸಿದರು.