ಸುದ್ದಿ ಸಂಕ್ಷೇಪ
ನವ ವರ್ಷ ಸಂಭ್ರಮ
ಜಾವಗಲ್: ಪಟ್ಟಣದಲ್ಲಿ 2014ನೇ ವರ್ಷವನ್ನು ನಾನಾ ಕಡೆ ಸಡಗರ ಮತ್ತು ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು.
ಇಲ್ಲಿನ ಎಸ್ಬಿಎಂ ಶಾಖೆಯಲ್ಲಿ ಜೆಡಿಎಸ್ ಅಧ್ಯಕ್ಷ ಎನ್.ಬಿ.ರಾಜಶೇಖರ್ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಣೆಗೆ ಚಾಲನೆ ನೀಡಿ ಜಿಲ್ಲೆಯ ಸಮಸ್ತ ಜನತೆಗೂ ಶುಭಾಷಯ ಕೋರಿದರು. ಶಾಖಾಧಿಕಾರಿ ಕಲೀಂದ್ರಕುಮಾರ್, ಗ್ರಾಹಕರಾದ ಗಂಗಾಧರ್, ಜೆ.ಕೆ.ರಾಜೇಗೌಡ, ಲೋಕೇಶ್, ಯೋಗೀಶ್, ನರಸಿಂಹಸ್ವಾಮಿ, ವಸಂತ್ಕುಮಾರ್, ಬಿಂದುಮಾಧವ, ಚಂದ್ರಪ್ಪ, ಇಂದ್ರೇಶ್ ಇದ್ದರು. ಪೊಲೀಸ್ ಠಾಣೆಯಲ್ಲಿ ತೆಂಗಿನ ಸಸಿಗಳನ್ನು ನೆಟ್ಟು, ಸಿಹಿ ಹಂಚಿ ಹೋಬಳಿ ಕರವೇ ಘಟಕದ ವತಿಯಿಂದ ಹೊಸ ವರ್ಷ ಆಚರಿಸಿತು.
ಹೋಬಳಿ ಕರವೇ ಅಧ್ಯಕ್ಷ ದಯಾನಂದ್, ಚಂದ್ರಪ್ಪ, ಇಂದ್ರೇಶ್, ಭಾನುಪ್ರಕಾಶ್, ಜೆ.ಕೆ.ರಾಜೇಗೌಡ, ಲೋಕೇಶ್, ಅನಿಲ್ಕುಮಾರ್, ಮಂಜುನಾಥ ಶೆಟ್ಟಿ, ಮುಖ್ಯಪೇದೆ ಶಿವರಾಮ ಇದ್ದರು. ಪಟ್ಟಣದ ನಾನಾ ಶಾಲಾ-ಕಾಲೇಜುಗಳಲ್ಲಿ, ಸಂಘಸಂಸ್ಥೆಗಳಲ್ಲಿ ನಾನಾ ಕಾರ್ಯಕ್ರಮಗಳು ನಡೆದವು.
ಮುಂದೂಡಿಕೆ
ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2013-14 ನೇ ಶ್ಯೆಕ್ಷಣಿಕ ಸಾಲಿನಲ್ಲಿ ಪ್ರಥಮ ಎಂ.ಎ., ಎಂ.ಕಾಂ, ಬಿ.ಎ., ಬಿ.ಕಾಂ ಹಾಗೂ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ 20 ಅಂಕಗಳ (80-20) ಆಂತರಿಕ ನಿಬಂಧನೆಗಳನ್ನು ಕಡ್ಡಾಯಗೊಳಿಸಲಾಗಿದೆ. ಆಯಾ ಶೈಕ್ಷಣಿಕ ವರ್ಷದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಲಿಖಿತ ನಿಬಂಧನೆಗಳನ್ನು ಮಾ.31ರೊಳಗೆ ಬಿ.ಎ., ಬಿ.ಕಾಂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಅಧ್ಯಯನ ಕೇಂದ್ರಗಳ ಸಂಯೋಜನಾಧಿಕಾರಿಗಳಿಗೆ ಹಾಗೂ ಎಂ.ಎ.,, ಎಂ.ಕಾಂ ವಿದ್ಯಾರ್ಥಿಗಳು ನೇರವಾಗಿ ಮೈಸೂರು ಕೇಂದ್ರ ಕಚೇರಿಗೆ ತಮ್ಮ ವಿಷಯಕ್ಕೆ ಸಂಬಂಧ ಪಟ್ಟ ವಿಭಾಗಕ್ಕೆ ತಪ್ಪದೇ ಸಲ್ಲಿಸಬೇಕು. ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು-06, ರ ವತಿಯಿಂದ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ 2013-14ನೇ ಶ್ಯೆಕ್ಷಣಿಕ ಸಾಲಿನ ಕೋರ್ಸ್ಗಳ ಪ್ರವೇಶಾತಿ ದಿನಾಂಕವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 400 ದಂಡಶುಲ್ಕದೊಂದಿಗೆ ಜ.4ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08172 269244, ಮೊ.ನಂ.9844145234.
ಅರ್ಜಿ ಆಹ್ವಾನ
ಹಾಸನ: ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನ, ಕೊಲ್ಕತ್ತಾ ಇವರಿಂದ 2013-14ನೇ ಸಾಲಿಗೆ ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ ಯೋಜನೆಯಡಿ ಧನ ಸಹಾಯ ನೀಡಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಪುಸ್ತಕಗಳು, ಪೀಠೋಪಕರಣಗಳು ಹಾಗೂ ಸಲಕರಣೆಗಳನ್ನು ಖರೀದಿಸಲು ಗ್ರಂಥಾಲಯದ ಕಟ್ಟಡ ಕಾಮಗಾರಿಗಳಿಗೆ ಧನ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆ ಲಗತ್ತಿಸಿ, ಜ.15 ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯ ಸಂಪರ್ಕಿಸಿ ಪಡೆಯಬಹುದಾಗಿದೆ.