ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಕ್ಕಲಿಗರ ಸಂಘದಿಂದ ಕುವೆಂಪು ದಿನಾಚರಣೆ

Mainashree
Updated On : 2 Jan 2014, 10:18 am

ಹಾಸನ: ನಗರದ ಹೊರ ವಲಯದಲ್ಲಿರುವ ಚೈತನ್ಯ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಕುವೆಂಪು ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಎನ್. ಹೇಮಲತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಎಲ್ಲರಿಗೂ ಹತ್ತಿರವಾದರು. ಅವರ ರಚಿತ ಕೃತಿಗಳು ಇಂದಿಗೂ ಕೂಡ ಜನಮನದಲ್ಲಿ ಉಳಿದಿದೆ. ಯಾವುದೇ  ಒಂದು ವರ್ಗಕ್ಕೆ ಸೀಮಿತವಾದ ಕೃತಿಯನ್ನು ರಚಿಸುತ್ತಿರಲಿಲ್ಲ. ಪ್ರತಿಯೊಬ್ಬರನ್ನೂ ಗಮನದಲ್ಲಿಟ್ಟುಕೊಂಡು ಯಾವ ಭೇದ ಮಾಡದೆ ರಚಿಸಿದ ಸಾಹಿತ್ಯ ಮನಮುಟ್ಟಿದೆ ಎಂದರು.
ಕುವೆಂಪು ಅವರ ಆದರ್ಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಮಕ್ಕಳು ತಮ್ಮ ತಂದೆ-ತಾಯಿಯನ್ನು ದೂರ ಮಾಡದೆ ಗೌರವದಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೃದ್ಧರಿಗೆ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಸಿಹಿಯನ್ನು ಹಾಗೂ ಹಣ್ಣುಗಳನ್ನು ನೀಡಿದರು. ಊಟದ ವ್ಯವಸ್ಥೆ ಮಾಡಲಾಗಿತ್ತು. ನಂತರ ವೃದ್ಧರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಸಂಘದ   ಉಪಾಧ್ಯಕ್ಷೆ ಭಾಗ್ಯ, ಜಂಟಿ ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಗಾಯಿತ್ರಿ, ನಿರ್ದೇಶಕರಾದ ಪುಷ್ಪಲತಾ, ಮಂಜುಳ, ಲತಾ, ಪದ್ಮವತಿ ಇತರರು ಇದ್ದರು. ಕಾರ್ಯದರ್ಶಿ ರೇಖಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement