ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಖಾತ್ರಿ ಸದ್ಬಳಕೆ ಮಾಡಿಕೊಳ್ಳಬೇಕು'

Mainashree
Updated On : 2 Jan 2014, 10:20 am

ಕ.ಪ್ರ.ವಾರ್ತೆ ಹೊಳೆನರಸೀಪುರ  ಜ.2
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ರೈತರು ತಮ್ಮ ಭೂಮಿಯನ್ನು ಫಲವತ್ತತೆ ಮಾಡಿಕೊಳ್ಳುವುದರಿಂದ ಅಧಿಕ ಇಳುವರಿ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಇಲ್ಲಿನ ತಾಲೂಕು ಪಂಚಾಯ್ತಿ  ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ತಿಳಿಸಿದರು.
ಕರೆ: ತಾಲೂಕಿನ ದೊಡ್ಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕುರಿತಂತೆ ಅರಿವು ಮೂಡಿಸುವ ಜನ ಜಾಗೃತಿ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಜನತೆಗೆ ವರದಾನವಾಗಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಗ್ರಾಮೀಣ ಜನತೆ ಮುಂದಾಗುವಂತೆ ಕರೆ ನೀಡಿದರು.
ಶಾಶ್ವತ ನೆಲೆ ಸಿಗಲಿದೆ: ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮದಲ್ಲಿನ ಪ್ರತಿಯೊಬ್ಬ ರೈತರು ಉಪಯೋಗಿಸಿಕೊಳ್ಳಲು ಸಾದ್ಯವಿದ್ದು, ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವರಿಗೆ ವರ್ಷದಲ್ಲಿ ಕನಿಷ್ಟ ನೂರು ದಿನಗಳು ಕೈತುಂಬ ಉದ್ಯೋಗ ದೊರೆಯಲಿದೆ. ಇದರಿಂದ ದಿನವೊಂದಕ್ಕೆ  ರು. 174 ಕೂಲಿ ಪಡೆಯಲು ಸಾಧ್ಯವಾಗಲಿದೆ ಎಂದರಲ್ಲದೇ, ಈ ನಿಟ್ಟಿನಲ್ಲಿ ಉದ್ಯೋಗ ಚೀಟಿ ನಿಮ್ಮ ಗ್ರಾಮ ಪಂಚಾಯ್ತಿಯಲ್ಲೇ ಪಡೆದುಕೊಳ್ಳಬಹುದಾಗಿದ್ದು, ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿನ ಬಡವರು ವಲಸೆ ಹೋಗುವುದನ್ನು ತಪ್ಪಿಸಿ ಅವರಿಗೆ ಉದ್ಯೋಗ ನೀಡಿದಲ್ಲಿ ವಲಸೆಯನ್ನು ತಪ್ಪಿಸಿ ಅವರಿಗೂ ಸಹ ಶಾಶ್ವತ ನೆಲೆ ದೊರೆತಂತಾಗಲಿದೆ ಎಂದರು.
ಕಿವಿಮಾತು: ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವರಿಗೆ ಪ್ರತಿ ವಾರಾಂತ್ಯದಲ್ಲಿ ಅವರು ದುಡಿದಿರುವ ಕೂಲಿ ಪಾವತಿ ಮಾಡುವುದು ಕಡ್ಡಾಯವಾಗಿದೆ. ಈ ಯೋಜನೆಯಡಿಯಲ್ಲಿ ಕಾಲುವೆಗಳನ್ನು ತೊಡುವುದು, ಮಣ್ಣಿನ ಅಣೆಕಟ್ಟೆಗಳು, ತಡೆಕಟ್ಟೆಗಳು ಒಳಗೊಂಡಂತೆ ಜಲ ಸಂರಕ್ಷಣೆ ರಚನೆಗಳು ಹಾಗೂ ನೀರು ತಡೆಗಟ್ಟುವ ರಚನೆಗಳು ಒಳಗೊಂಡಿದೆ. ಜತೆಗೆ ಅರಣ್ಯೀಕರಣ ಮತ್ತು ನೆಡು ತೋಪುಗನ್ನೊಳಗೊಂಡ ಬರ ತಡೆಯುವ  ಕಾಮಗಾರಿಗಳು ಸೇರ್ಪಡೆಯಾಗಿದೆ. ಆದ್ದರಿಂದ, ಗ್ರಾಮೀಣ ಪ್ರದೇಶದ ರೈತರುಗಳು ಈ ಉದ್ಯೋಗ ಖಾತ್ರಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮಶೇಖರ್ ಉದ್ಘಾಟಿಸಿ ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿನ ರೈತರು ಸದುಪಯೋಗ ಪಡಿಸಿಕೊಂಡಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮಪಂಚಾಯ್ತಿ ಸದಸ್ಯ ಚಿಕ್ಕೆಗೌಡ, ರಾಜೇಗೌಡ, ಯಾಲಕ್ಕಿಶೆಟ್ಟಿ, ಕಮಲಮ್ಮ ಇದ್ದರು. ಕಾರ್ಯದರ್ಶಿ ಶ್ರೀನಿವಾಸ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement