ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಖಾಸಗಿ ಶಾಲೆಗಳ ಇಂಗ್ಲೀಷ್ ವ್ಯಾಮೋಹ: ಶಿಕ್ಷಣಾಧಿಕಾರಿಗೆ ದೂರು

Mainashree
Updated On : 2 Jan 2014, 10:19 am

ಚನ್ನರಾಯಪಟ್ಟಣ: ತಾಲೂಕಿನ ಖಾಸಗಿ ಶಾಲೆಗಳು ಇಂಗ್ಲಿಷ್ ಭಾಷೆಯ ಆಮಿಷ ತೋರಿ ಪೋಷಕರನ್ನು ವಂಚಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್. ಲೋಕೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಖಾಸಗಿ ಶಾಲೆಗಳು ಕನ್ನಡ ಭಾಷಾ ಕಲಿಕೆಗೆ ಅನುಮತಿ ಪಡೆದು ಪೋಷಕರಿಗೆ ಇಂಗ್ಲೀಷ್ ಮಾಧ್ಯಮವೆಂದು ವಂಚಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಿಲ್ಲದಿದ್ದರೆ ಅವರ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಪ: ಕನ್ನಡ ಭಾಷಾ ಕಲಿಕೆಗೆ ಅನುಮತಿ ಪಡೆದ ಶಾಲೆಗಳು ತಮ್ಮ ವಾರ್ಷಿಕೋತ್ಸವ ಆಹ್ವಾನ ಪತ್ರಿಕೆಯಲ್ಲಿ ಒಂದಕ್ಷರವನ್ನೂ ಕನ್ನಡದಲ್ಲಿ ಮುದ್ರಿಸದೇ ಪೋಷಕರಿಗೆ ಇಂಗ್ಲೀಷ್ ವ್ಯಾಮೋಹವನ್ನು ತುಂಬುತ್ತಿರುವ ಜತೆಗೆ ಸಾರ್ವಜನಿಕವಾಗಿ ಮೋಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಶಾಲೆ ಪ್ರಾರಂಭದ ಸಂದರ್ಭದಲ್ಲಿ ಪೋಷಕರಿಂದ ಹಣವನ್ನು ಪೀಡಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದರು.
ತಾಲೂಕು ಕಸಾಪ ಕಾರ್ಯದರ್ಶಿ ಶಿವರಾಂ, ಕರ್ನಾಟಕ ಸಮರ ಸೇನೆ ಜಿಲ್ಲಾಧ್ಯಕ್ಷ ಭರತ್, ರೈತ ಸಂಘದ ಮುಖಂಡ ಸತ್ತೀಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement