ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 2 Jan 2014, 10:18 am

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಭೆ
ಹಾಸನ: ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಅವರು ಜ. 3ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಮಧ್ಯಾಹ್ನ 3 ಗಂಟೆಗೆ ವಿದ್ಯುತ್ ಟ್ರಾನ್ಸ್‌ಮಿಷನ್ ವಲಯದ ಕೆಲಸಗಳ ಪ್ರಗತಿ ಪರಿಶೀಲನೆ ನಡೆಸಿ ಸಂಜೆ 6 ಗಂಟೆಗೆ ಬೆಂಗಳೂರಿಗೆ ತೆರಳುವರು.
ತೆಂಗಿನ ಮರ ಹತ್ತುವ ಬಗ್ಗೆ ತರಬೇತಿ
ಹಾಸನ: ರೈತರು ತೆಂಗಿನ ಮರ ಹತ್ತುವ ಸಾಧನದ ತರಬೇತಿಯನ್ನು ಪಡೆದು ಸ್ವಯಂ ಉದ್ಯೋಗಿಗಳಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಸಿದ್ದರಾಜು ತಿಳಿಸಿದರು.  ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್. ಚನ್ನಕೇಶ ವಂದಿಸಿದರು. ಸಮಾರಂಭದಲ್ಲಿ, ತೆಂಗು ಅಭಿವೃದ್ಧಿ  ಮಂಡಳಿಯ ತರಬೇತುದಾರ ಕಾಂತರಾಜು ಇದ್ದರು.
ವ್ಯಕ್ತಿ ನಾಪತ್ತೆ
ಹಾಸನ: ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ, ದೊಂಬರಕೊಪ್ಪಲು ಗ್ರಾಮದ ಕೃಷ್ಣ (34) ಅವರು ಮನೆಯಿಂದ ಕೇರಳಾಪುರ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ: 5.4 ಅಡಿ ಎತ್ತರ, ಅಗಲಮುಖ, ಅರ್ಧ ತೋಳಿನ ಬಿಳಿ ಶರ್ಟ್, ನೀಲಿ ಬಣ್ಣದ ಲುಂಗಿ ಧರಿಸಿರುತ್ತಾರೆ. ಪತ್ನಿ ಸರೋಜಮ್ಮ ರವರು ಕೊಣನೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಅಪರಿಚಿತ ಸಾವು
ಹಾಸನ: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಕಲೇಶಪುರ ಪಟ್ಟಣದ ಬಿ.ಎಂ.ರಸ್ತೆ ಟೋಲ್ ಗೇಟ್ ಹತ್ತಿರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ವಾಹನದ ಚಕ್ರ  ಹರಿದ ಪರಿಣಾಮ 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಜ್ಞಾನವಿಜ್ಞಾನ ಸಮಿತಿ ತಾಲೂಕುಅಧ್ಯಕ್ಷರಾಗಿ ದಿವಾಕರ್ ಆಯ್ಕೆ
ಹೊಳೆನರಸೀಪುರ: ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಿಕ್ಷಕ ಕೆ.ಎಲ್. ದಿವಾಕರ್ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಲ್. ದಿವಾಕರ್ ಅವರನ್ನು ತಾಲೂಕು ಪ್ರಾ.ಶಾ.ಶಿ. ಸಂಘದ ಅಧ್ಯಕ್ಷರಾದ ಮಂಜುನಾಥ್, ತಾಲೂಕು ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಜವರೇಗೌಡ, ರೋಟರಿ ಸಂಸ್ಥೆಯ ಅಧ್ಯಕ್ಷ ರೊ.ಆರ್.ಬಿ. ಪುಟ್ಟೇಗೌಡ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಹಾಗೂ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಸ್. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ವಿದ್ಯಾವಂತರಲ್ಲೇ ಏಡ್ಸ್ ಹೆಚ್ಚು: ರವಿಕುಮಾರ್
ಜಾವಗಲ್:  ಏಡ್ಸ್ ರೋಗವು ಅವಿದ್ಯಾವಂತರಿಗಿಂತ ವಿದ್ಯಾವಂತರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮೇಲ್ವಿಚಾರಕ ರವಿಕುಮಾರ್ ಅಭಿಪ್ರಾಯಪಟ್ಟರು.
ಜಾವಗಲ್ ಗ್ರಾಮ ಪಂಚಾಯ್ತಿ, ಐ.ಸಿ.ಟಿ.ಸಿ. ಪ್ರಾಥಮಿಕ ಆರೋಗ್ಯಕೇಂದ್ರ ,  ಜಾವಗಲಲ್ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್‌ಗೂ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಏಡ್ಸ್ ಪೀಡಿತ ವ್ಯಕ್ತಿಯನ್ನು ಕುಟುಂಬದವರು ಮತ್ತು ಸಮಾಜ ಪ್ರೀತಿಯಿಂದ ಕಂಡಲ್ಲಿ ನೆಮ್ಮದಿಯಿಂದ ಬದುಕುತ್ತಾರೆ ಎಂದರು. ಹೆಚ್.ಐ.ವಿ ಸೋಂಕಿತ ವ್ಯಕ್ತಿಯೊಂದಿಗೆ ವಾಸಮಾಡುವುದು ಹಾಗೂ ಕೆಲಸಮಾಡುವುದರಿಂದ ರೋಗಹರಡುವುದಿಲ್ಲವೆಂದರು. ಹೆಚ್.ಐ.ವಿ ಮುಕ್ತ ರಾಷ್ಟ್ರನಿರ್ಮಾಣ ಮಾಡುವಲ್ಲಿ ಯುವಜನೆತೆಯಪಾತ್ರ ಪ್ರಾಮುಖ್ಯತೆ ಹೊಂದಿದೆ ಎಂದರು.  ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಏಡ್ಸ್ ರೋಗ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸುವ ಅನಿವಾರ್ಯತೆಯಿದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಕವಿತ ಮಂಜುನಾಥ್ ಮಾತನಾಡಿ, ಏಡ್ಸ್ ರೋಗಿಗಳಲ್ಲಿ ಬದುಕುವ ಆತ್ಮವಿಶ್ವಾಸ ಮೂಡಿಬೇಕೆಂದರು. ಡಾ. ರವೀಂದ್ರ, ಶಿಕ್ಷಕರಾದ ರಾಮಲಿಂಗಯ್ಯ, ಆಶೋಕ್ ಲಾಲ್, ಗಣೇಶಪ್ಪ, ರುದ್ರಯ್ಯಡಿಂಗಾಲಿ, ನಿಜಲಿಂಗಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement