ಇಂದು ರಾಷ್ಟ್ರಕವಿಗೆ ಗೀತ ನಮನ
ಹಾಸನ: ಮಿಂಚು ಸಂಗೀತ ಶಾಲೆಯ ವತಿಯಿಂದ ರಾಷ್ಟ್ರಕವಿ ಡಾ.ಜಿ.ಎಸಸ್ಶಿವರುದ್ರಪ್ಪ ಅವರಿಗೆ ಗೀತನಮನ ಕಾರ್ಯಕ್ರಮವನ್ನು ಜ.4ರಂದು ಸಂಜೆ 6ಕ್ಕೆ ನಗರದ ಶಂಕರಮಠ ರಸ್ತೆಯಲ್ಲಿ ಇರುವ ಯೂನಿ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ಧನ್, ಅಮೋಘ್ ಬ್ರಾಡ್ಬ್ಯಾಂಡ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಕೆ.ಪಿ.ಎಸ್. ಪ್ರಮೋದ್ ಭಾಗವಹಿಸುವರು. ರೋಹನ್ ಆರ್. ಅಯ್ಯರ್ ಅವರ ಗಾಯನ ಹಾಗೂ ಜಿ.ಎಸ್. ಮಂಜುನಾಥ್ ವ್ಯಾಖ್ಯಾನ ಮಾಡುವರು. ಎಚ್.ಜಿ. ರಂಗನಾಥ್ ಕಾರ್ಯಕ್ರಮ ನಿರೂಪಿಸುವರು.