ಕ್ಯಾನ್ಸರ್ ಪೀಡಿತ ಪತಿಗೆ ನೆರವು ನೀಡಲು ಮನವಿ
ಕನ್ನಡಪ್ರಭ ವಾರ್ತೆ, ಹಾಸನ, ಜ. 3
ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತಿ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವಂತೆ ಪತ್ನಿ ಪ್ರಭಾವತಿ ಮನವಿ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂರು ತಾಲೂಕಿನ ಹೊತನಹಳ್ಳಿಪುರ ಗ್ರಾಮದ ವಾಸಿಯಾಗಿರುವ ನಾವು ಕಳೆದ 2 ವರ್ಷಗಳಿಂದ ಪತಿ ಪರಮೇಶ್‌ಗೆ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ. ಇದರಿಂದ ಇವರ ದೇಹದಲ್ಲಿ ಬಿಳಿ ಹಾಗೂ ಕೆಂಪು ರಕ್ತಕಣಗಳ ಉತ್ಪತ್ತಿ ಸಂಪೂರ್ಣವಾಗಿ ನಿಂತು ಹೋಗಿದೆ. ತಿಂಗಳಿಗೊಮ್ಮೆ ರಕ್ತವನ್ನು ಇವರಿಗೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಕೊಂಡರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರು. 5ರಿಂದ 6 ಲಕ್ಷ ವೆಚ್ಚ ಆಗಲಿದ್ದು, ಆದಕ್ಕಾಗಿ ಆರ್ಥಿಕ ಸಹಾಯ ಮಾಡುವವರು ಪ್ರಭಾವತಿ, ಕರ್ನಾಟಕ ಬ್ಯಾಂಕ್ ಆಲೂರು ಬ್ರಾಂಚ್, ನಂ. 3262500100436601ಗೆ ಹಣ ಪಾವತಿಸಬಹುದಾಗಿದೆ ಎಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ ಮೊ. ಸಂಖ್ಯೆ. 9535768169 ಸಂಪರ್ಕಿಸಬಹುದಾಗಿದೆ.