ಚಿರತೆ ದಾಳಿಗೆ ಕರು ಬಲಿ
ಹಾಸನ: ಚಿರತೆ ದಾಳಿ ನಡೆಸಿ ಕರುವನ್ನು ತಿಂದು ಹಾಕಿರುವ ಘಟನೆ ತಾಲ್ಲೂಕಿನ ದುದ್ದ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ದುದ್ದಹೋಬಳಿಯ ಜಕ್ಕೇನಹಳ್ಳಿ ಗ್ರಾಮದ ವಾಸಿ ನಾಗೇಶ್ ಎಂಬುವರಿಗೆ ಸೇರಿದ ಒಂದು ವರ್ಷದ ಕರುವನ್ನು ಶುಕ್ರವಾರ ಬೆಳಿಗ್ಗೆ ತಮ್ಮ ಫಾರಂ ಬಳಿ ಕಟ್ಟಿ ಹಾಕಿದ್ದಾಗ ಚಿರತೆ ದಾಳಿ ಮಾಡಿ ತಿಂದು ಹಾಕಿ, ಪರಾರಿಯಾಗಿದೆ. ಸಮೀಪ ಕೋರವಂಗಲ ಕಾವಲಿನಿಂದ ಚಿರತೆ ಗ್ರಾಮದೊಳಗೆ ನುಗ್ಗಿದ್ದು, ಇಲ್ಲಿನ ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು.