ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಯ ಕರ್ನಾಟಕ ಪದಾಧಿಕಾರಿಗಳ ಆಯ್ಕೆ

Mainashree
Updated On : 3 Jan 2014, 9:51 am

ಬೇಲೂರು: ಜಯ ಕರ್ನಾಟಕ ಸಂಘಟನೆ ತಾಲೂಕಿನಲ್ಲಿ ಉತ್ತಮ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಶಕ್ತಿಯುತವಾಗಿ ಕಟ್ಟಲಾಗುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಐ.ಎನ್. ಅರುಣ್ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆಯಲಾಗಿದ್ದ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ತಾಲ್ಲೂಕಿನ ನೂತನ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾಗಿ ಸೋಮೇಶ್, ತಾಲೂಕು ಗೌರವ ಅಧ್ಯಕ್ಷ ವಿ.ಎಸ್. ಬೋಜೇಗೌಡ, ನಗರಾಧ್ಯಕ್ಷ ಬಿ.ಎಲ್. ಲಕ್ಷ್ಮಣ್, ಕಾರ್ಯಾಧ್ಯಕ್ಷ ಜಯಂತ್.ಕೆ.ಆರ್, ಸಾಂಸ್ಕೃತಿಕ ಘಟಕ ಅಧ್ಯಕ್ಷ ಕೇಬಲ್ ವಿಜಯ್ ಕುಮಾರ್, ಯುವ ಘಟಕ ಅಧ್ಯಕ್ಷ ಬಿ.ಬಿ. ಶಿವರಾಜ್, ಮಹಿಳಾ ಘಟಕ ಅಧ್ಯಕ್ಷರಾಗಿ ಜಯಂತಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಮ್ಮಾನ್ಪಾಷಾ, ಎಸ್ಸಿ- ಎಸ್ಟಿ ಘಟಕ ಅಧ್ಯಕ್ಷರಾಗಿ ನಿಂಗರಾಜು, ನಗರ ಯುವ ಅಧ್ಯಕ್ಷ ಗಿರೀಶ್, ನಗರ ಸಾಂಸ್ಕತಿಕ ಘಟಕ ಅಧ್ಯಕ್ಷ ಮಹೇಶ್ ಮತ್ತು ತಾಲೂಕು ಉಪಾಧ್ಯಕ್ಷರನ್ನಾಗಿ ಅಕ್ಕಿ ರಾಜು, ಜಯಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ.
ತಾಲೂಕು ಎಸ್ಸಿ- ಎಸ್ಟಿ ಘಟಕ ರವಿ ಮಧಘಟ್ಟ, ತಾಲೂಕು ಯುವ ಉಪಾಧ್ಯಕ್ಷರಾಗಿ  ಕುಮಾರ್, ಜಗದೀಶ್, ನಗರ ಉಪಾಧ್ಯಕ್ಷರಾಗಿ ರಾಜು ಎಸ್.ಎಮ್, ಗಿರೀಶ್ ಟೈಲ್ಸ್, ನಗರ ಯುವ ಉಪಾಧ್ಯಕ್ಷರಾಗಿ ಎಂ.ಎನ್. ಗಿರೀಶ್, ಎಸ್.ಪಿ. ಮಣಿಕಂಠ, ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುಜಮಿಲ್, ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ವಿ. ಮಂಜುನಾಥ್, ತಾಲೂಕು ಕಾರ್ಯದರ್ಶಿ ಹೆಬ್ಬಾಳು ಸೋಮಶೇಖರ್, ಬಿ.ಬಿ. ಕುಮಾರ್,  ನಗರ ಯುವ ಪ್ರಧಾನ ಕಾರ್ಯದರ್ಶಿಯಾಗಿ ಕುಮಾರ್, ತಾಲೂಕು ಯುವ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ರಮೇಶ್, ಗೌತಮ್, ತಾಲೂಕು ಯುವ ಸಂಘಟನಾ ಕಾರ್ಯದರ್ಶಿಯಾಗಿ ಧರ್ಮಚಾರಿ, ಸಂಘಟನಾ ಕಾರ್ಯದರ್ಶಿ- ರಮೇಶ್, ನಗರ ಪ್ರಧಾನ ಕಾರ್ಯದರ್ಶಿ - ಸುನೀಲ್, ನಗರ ಕಾರ್ಯದರ್ಶಿ-  ಜಯರಾಂ, ನಗರ ಯುವ ಕಾರ್ಯದರ್ಶಿ- ನಿಂಗರಾಜು,  ಸಂಘಟನಾ ಕಾರ್ಯದರ್ಶಿ - ಮಂಜುನಾಥ್, ಗೌರವ ಸಲಹೆಗಾರರಾಗಿ ಡಿ. ರಾಜಪ್ಪ, ಸಿದ್ದೇಗೌಡ, ಎನ್. ಕಣ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement