ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೌರ್ಜನ್ಯ ಖಂಡಿಸಿ ಪ್ರತಿಭಟನೆ

Mainashree
Updated On : 3 Jan 2014, 9:52 am

ಕ.ಪ್ರ. ವಾರ್ತ್ಣೆ ಹಾಸನ್ಣ ಜ.3
ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮತ್ತು ಪೊಲೀಸರು ಸಂಬಂಧಪಟ್ಟವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ ಬಿ.ಎಂ. ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಗ್ರಾಮಗಳಲ್ಲಿ ದೌರ್ಜನ್ಯ: ಇತ್ತೀಚೆಗೆ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಹೆಚ್ಚಾಗುತ್ತಿದೆ. ಅದರಲ್ಲೂ ಅರಕಲಗೂಡು ತಾಲೂಕಿನಲ್ಲಿ ಈ ರೀತಿಯ ಆಚರಣೆಗಳು ಹೆಚ್ಚಾಗಿ ಬೆಳೆಕಿಗೆ ಬರುತ್ತಿವೆ. ತಾಲೂಕಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಾಮಫಲಕಕ್ಕೆ ಅಪಮಾನ ಮಾಡುವುದು, ಭಾವಚಿತ್ರವನ್ನು ವಿರೂಪಗೊಳಿಸಿ ಅಸ್ಪೃಶ್ಯತೆ ಆಚರಣೆ ಮಾಡುವುದು. ಹಳ್ಳಿಗಳಲ್ಲಿ ಇಂದಿಗೂ ಗ್ರಾಮದ ಚಾಕರಿ ನಡೆಯುತ್ತಿದ್ದು, ಸತ್ತ ಪ್ರಾಣಿಗಳನ್ನು ಎತ್ತು ಹಾಕುವುದು, ತಮಟೆ ಹೊಡೆಯುವುದು, ಗುದ್ದು ತೆಗೆಯುವುದು ಕಸ ಹಾಕುವುದು, ಕುಳುವಾಡಿಕೆ ಮಾಡಿಸುವಂತಹ ಹೀನ ಕೃತ್ಯಗಳು ನಿರಂತರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಲವಂತವಾಗಿ ನಡೆಯುತ್ತಲೇ ಎಂದು ಆರೋಪಿಸಿದರು.
ದೂರು: ಈ ವಿಚಾರವಾಗಿ ಅರಕಲಗೂಡು ಪೊಲೀಸ್ ಠಾಣೆ, ಕೊಣನೂರು ಪೊಲೀಸ್ ಠಾಣೆ, ಹೊಳೆನರಸೀಪುರ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸು ದಾಖಲಾದರೂ ಇದುವರೆಗೂ ಆರೋಪಿಗಳನ್ನು ಬಂಧಿಸದೇ ದಿವ್ಯ ನಿರ್ಲಕ್ಷ್ಯ ತಾಳಿದಿದ್ದಾರೆ.
 ಇದರಿಂದ ದಲಿತರಿಗೆ ಹಳ್ಳಿಗಳಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ದಲಿತರು ಭಯದ ವಾತಾವರಣದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪಟ್ಟು: ಆನಂದೂರು, ಬಂಗಿ ತಿಮ್ಮನ್ನಯನಕೊಪ್ಪಲು, ರಾಗಿಮರೂರು ಗ್ರಾಮಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವವರನ್ನು ಬಂಧಿಸಬೇಕು. ಹೊಳೆನರಸೀಪುರ ಮುದ್ದನಹಳ್ಳಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು.   ಹೊಳೆನರಸೀಪುರ ಸಿ- ಹಿಂದಲಹಳ್ಳಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು.
ಒತ್ತಾಯಿಸಬೇಕು: ಆಸ್ಪೃಶ್ಯತೆ ನಡೆದಿರುವ ಗ್ರಾಮಗಳಲ್ಲಿ ಶಾಂತಿಸಭೆ ನಡೆಸಿ ಸವರ್ಣೀಯರು ಮತ್ತು ಅಸ್ಪೃಶ್ಯರ ನಡುವೆ ಸಾಮರಸ್ಯ ಮೂಡಿಸಬೇಕು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿನ ಪೊಲೀಸ್ ಕಚೇರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್, ಜಿಲ್ಲಾ ಸಂಯೋಜಕ ಕುಮಾರ್ ಗೌರವ್, ಜಿಲ್ಲಾ ಸಂಯೋಜಕ ಹಾಗೂ ಉಸ್ತುವಾರಿ ಎ.ಪಿ.ಅಹಮದ್, ಉಪಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಹರೀಶ್, ಶಿವಮ್ಮ, ಮಕ್ತರ್ ಪಾಷ, ಮಹೇಶ್ ಹಾಗೂ ಇತರರು ಇದ್ದರು.

ಭೂಮಿ ದಲಿತರಿಗೆ ನೀಡಿ
 ಬಸವನಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಬಸವನಹಳ್ಳಿಯಲ್ಲಿ ಹಲವು ವರ್ಷಗಳಿಂದ ಸ್ಥಗಿತವಾಗಿರುವ ಅಂಬೇಡ್ಕರ್ ಭವನ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ದಲಿತರಿಗೆ ಸ್ಮಶಾನ ಭೂಮಿಯನ್ನು ಕಾಯ್ದಿರಿಸಿಕೊಡಬೇಕು. ಬಸವನಹಳ್ಳಿ ವಡ್ಡರಕಟ್ಟೆ ಮತ್ತು ಚಿಮ್ಮಿನಕಟ್ಟೆ ಜಮೀನನ್ನು ಕೂಡಲೇ ದಲಿತರಿಗೆ ಕೊಡುವಂತಹ ವ್ಯವಸ್ಥೆ ಆಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement