ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆ ನಾಪತ್ತೆ

Mainashree
Updated On : 3 Jan 2014, 9:50 am

ಹಾಸನ: ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಹೊಳೆನರಸೀಪುರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಬಡಾವಣೆಯ ಪರಮೇಶ ಎಂಬವರ ಪತ್ನಿ ಮಮತ (23) ನಾಪತ್ತೆಯಾದವರು. ಡಿ.17ರಂದು ರಾತ್ರಿ 8.30ರ ವೇಳೆಗೆ, ಪರಮೇಶ ಅವರು ಮನೆಗೆ ಬಂದು ಪತ್ನಿ ಮಮತಾ ಅವರನ್ನು ಊಟ ಬಡಿಸಲು ಕೇಳಿದ್ದಾರೆ. ಆಗ, ಮಮತಾ ಅವರು, ಕೈಕಾಲು ತೊಳೆದು ಬರುವಂತೆ ಪತಿಗೆ ಸೂಚಿಸಿ, ಇಲ್ಲೇ ಹೋಗಿ ಬರುವುದಾಗಿ ಮನೆಯಿಂದ ಹೊರಗೆ ತೆರಳಿದ್ದಾರೆ. ಆದರೆ, ಮತ್ತೆ ಮನೆಗೆ ಬಂದಿಲ್ಲ.
ಚಹರೆ: 5.1 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಗೆಡ್ಡೆ ಮೂಗು, ಮೈಕಟ್ಟು, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕನ್ನಡ, ಮರಾಠಿ ಮಾತನಾಡುತ್ತಾರೆ. ಎಡಗೈಯಲ್ಲಿ  ಪಿಎಂ ಎಂದು  ಹಚ್ಚೆ ಗುರುತಿದೆ. ಮನೆ ಬಿಟ್ಟಾಗ ಕೆಂಪು ಬಣ್ಣದ ನೈಟಿ ಧರಿಸಿದ್ದರು ಎಂದು  ಪರಮೇಶ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.
ಮಾಹಿತಿ ದೊರೆತವರು: ಕಂಟ್ರೋಲ್ ರೂಮ್, ಹಾಸನ -268845 (08172), ಸಿಪಿಐ ಹೊ.ನ.ಪುರ ವೃತ್ತ 273349 (08175), ಪಿಎಸ್‌ಐ ಹೊ.ನ.ಪುರ ನಗರ ಠಾಣೆ 273333 (08175)- 9480804765 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement