ಲಾರಿ ಪಲ್ಟಿ: ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು
ಅರಸೀಕೆರೆ: ಪಟ್ಟಣದ ಮೈಸೂರು ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ತಮಿಳುನಾಡಿನ ಲಾರಿಯೊಂದು ಆಯ ತಪ್ಪಿದ ಪರಿಣಾಮ ಲಾರಿಯು ಮಗುಚಿ ಬಿದ್ದು, ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಇತ್ತೀಚೆಗೆ ನಡೆದಿದೆ. ಶಿವಮೊಗ್ಗದಿಂದ ತಮಿಳುನಾಡಿನ ದಿಂಡಿಗಲ್ಗೆ ಬತ್ತದ ಮೂಟೆಗಳನ್ನು ಹೊತ್ತು ಸಾಗುತ್ತಿದ್ದ ಈ ಲಾರಿಯು ಮಾರ್ಗ ವ್ಯತ್ಯಾಸದಿಂದ ಹಾಸನದ ಕಡೆಗೆ ಹೊರಟ ಲಾರಿಯು ದಾರಿ ಕಾಣದೆ ಮೈಸೂರು ರಸ್ತೆಗೆ ಪುನಃ ಲಾರಿಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವಾಗ ಈ ಅವಘಡ ಸಂಭವಿಸಿದೆ. ಚಾಲಕ ಮುರುಗನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈತನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಲೀನರ್ ಬಾಲು ಅಪಾಯದಿಂದ ಪಾರಾಗಿದ್ದಾರೆ.