ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೊಲೀಸರಿಂದ ರಸ್ತೆ ಸುರಕ್ಷಾ ಸಪ್ತಾಹ

Mainashree
Updated On : 4 Jan 2014, 9:10 am

ಕನ್ನಡಪ್ರಭ ವಾರ್ತೆ, ಹಾಸನ, ಜ.4
ರಸ್ತೆ ಸುರಕ್ಷತೆ ಸಪ್ತಾಹದ ಅಂಗವಾಗಿ ಶನಿವಾರ ಹಾಸನ ನಗರದಲ್ಲಿ ಇಡೀ ಪೊಲೀಸ್ ಇಲಾಖೆ ಬೀದಿಗೆ ಇಳಿದಿತ್ತು. ಜೊತೆಗೆ ಖಾಸಗಿ ವಾಹನಗಳ ಚಾಲಕರು ಸಹ ಪೊಲೀಸರೊಡನೆ ಸಾಥ್ ನೀಡಿದರು. ಎಸ್ಪಿ ಚನ್ನಣ್ಣನವರ್ ಅವರೇ ಸ್ವತಃ ಬೀದಿಯಲ್ಲಿ ನಿಂತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕರ ಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ಗಮನ ಸೆಳೆದರು.
ಜಾಥಾ: ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ ಅವರ ಜೊತೆ ಹೆಚ್ಚುವರಿ ಎಸ್ಪಿ ಜೈನಹಳ್ಳಿ ರಶ್ಮಿ ಶಂಕರೇಗೌಡ, ಡಿವೈಎಸ್ಪಿ ಭೀಮಕ್ಕನವರ್ ಸೇರಿದಂತೆ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳು, ಕಾನ್‌ಸ್ಟೇಬಲ್‌ಗಳು ಮತ್ತು ಖಾಸಗಿ ವಾಹನಗಳ ಚಾಲಕರು ಒಟ್ಟಾಗಿ ಸಾರ್ವಜನಿಕರಿಗೆ ವಾಹನ ಚಾಲನೆ ಜವಾಬ್ದಾರಿ ಮತ್ತು ಅರಿವು ಮೂಡಿಸುವ ಘೋಷಣೆ ಪತ್ರಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ಎಚ್ಚರಿಕೆ: ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ, ರಸ್ತೆ ಸುರಕ್ಷತಾ ಸಪ್ತಾಹ ಪ್ರಯುಕ್ತ ವಾಹನ ಚಾಲಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಎಸ್ಪಿ ಚನ್ನಣ್ಣನವರ, ಯಾವ ಸಂದರ್ಭದಲ್ಲಾದರೂ ಸಹ ವಾಹನ ಚಾಲಕರು ಅತಿ ವೇಗದಲ್ಲಿ ಚಾಲನೆ ಮಾಡದೇ ಕಾನೂನು ನಿಯಮದ ಪ್ರಕಾರ ನಡೆಯಬೇಕು. ವೃತ್ತದಲ್ಲಿ ನಿಗದಿಪಡಿಸಲಾಗಿರುವ ಜಾಗದಲ್ಲಿ ನಿಲ್ಲಿಸಿ ಸಿಗ್ನಲ್ ಲೈಟ್ ವೀಕ್ಷಿಸಬೇಕು. ಏಕಮುಖಿ ಸಂಚಾರ ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಹಕಾರ ಬೇಕು: ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ವಾಹನ ಚಾಲಕರು ಕಡ್ಡಾಯವಾಗಿ ಸಂಬಂಧಿಸಿದ ದಾಖಲೆ ಪತ್ರವನ್ನು ಹೊಂದಿರಬೇಕು.
ವಾಹನ ಚಾಲನೆ ಮಾಡುವ ಪ್ರತಿಯೊಬ್ಬರೂ ಪೊಲೀಸ್ ಸಿಬ್ಬಂದಿಯವರೊಂದಿಗೆ ಸಹಕರಿಸಬೇಕು. ಕೇಳುವ ವಾಹನದ ದಾಖಲೆಯನ್ನು ತೋರಿಸುವ ಮೂಲಕ ಪೊಲೀಸರಿಗೆ ಸಹಕರಿಸಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement