ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 4 Jan 2014, 9:10 am

ಕ್ರೀಡೆಗೂ ಆದ್ಯತೆ ಇರಲಿ: ವಾಸು
ಮೈಸೂರು: ಇಂದಿನ ಯುವಜನತೆ ವಿದ್ಯೆಯಂತೆ ಕ್ರೀಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಶಾಸಕ ವಾಸು ಹೇಳಿದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಕುವೆಂಪುನಗರದ ಬಿಜಿಎಸ್ ವಿದ್ಯಾಪೀಠದ ಆವರಣದಲ್ಲಿ ಏರ್ಪಡಿಸಿದ್ದ 17ನೇ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಸಮಾರೋಪದಲ್ಲಿ ಶನಿವಾರ ಅವರು ಮಾತನಾಡಿದರು.  
ಗ್ರಾಮೀಣ ಭಾಗದ ಅನೇಕ ಪ್ರತಿಭೆಗಳು ಪಾದರಕ್ಷೆ ಇಲ್ಲದೆ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಸಾಕಷ್ಟು ಉದಾಹರಣೆಗಳಿವೆ. ಇಂತಹ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ  ಸಾಧನೆ ಮಾಡಲು ಸಾಕಷ್ಟು ಅವಕಾಶವಿದೆ. ಆ ಮೂಲಕ ದೇಶದ ಕೀರ್ತಿ ಬೆಳಗಿಸಬಹುದು ಎಂದರು.
ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗಗಳಲ್ಲಿನ ವಿವಿಧ ಕ್ರೀಡೆಗಳಲ್ಲಿ ಹೆಚ್ಚಿನ ಬಹುಮಾನ ಗಳಿಸಿದ ನಾಗಮಂಗಲ ತಾಲೂಕಿನ ಬಿಜಿಎಸ್ ಶಿಕ್ಷಣ ಸಂಸ್ಥೆಯು ( ಎ ವಿಭಾಗ ತಂಡ) ಛಾಂಪಿಯನ್ ಟ್ರೋಫಿ ಪಡೆಯಿತು.  
ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಹಾಗೂ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಿವಿಧ ಶಾಖಾ ಮಠದ ಶ್ರೀಗಳು ಉಪಸ್ಥಿತರಿದ್ದರು.  
ವಿಧಾನಪರಿಷತ್ ಸದಸ್ಯ ಡಿ. ಮಾದೇಗೌಡ, ಮಾಜಿ ಮೇಯರ್ ಮೋದಾಮಣಿ, ಪಾಲಿಕೆ ಸದಸ್ಯ ಲಿಂಗಪ್ಪ, ಮೋಹನ್‌ಕುಮಾರ್‌ಗೌಡ, ರೈತ ಮುಖಂಡ ಬೆಳಗೊಳ ಸುಬ್ರಹ್ಮಣ್ಯ, ಎಸಿಪಿ ಜಯಮಾರುತಿ, ಟ್ರಸ್ಟ್ ಆಡಳಿತಾಧಿಕಾರಿ ಶಿವೇಗೌಡ ಮತ್ತಿತರರು ಉಪಸ್ಥಿತರಿದ್ದರು.   
ಇಬ್ಬರ ಶವ ಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮೈಸೂರು ಮತ್ತು ಚಾಮರಾಜನಗರ ರೈಲು ನಿಲ್ದಾಣಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮೈಸೂರು ರೈಲು ನಿಲ್ದಾಣದ ಫ್ಲಾಟ್ ಫಾರಂ 2ರಲ್ಲಿ ರೈಲಿನ ಬೋಗಿ ಶೌಚಾಲಯದ ಬಳಿ ಶನಿವಾರ 55 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.
ಚಹರೆ: 5.6 ಅಡಿ ಎತ್ತರ, ದೃಢಕಾಯ ಮೈಕಟ್ಟು, ಕಪ್ಪು ಮೈಬಣ್ಣ, ದುಂಡುಮುಖ, ತಲೆಯಲ್ಲಿ ಕಪ್ಪು- ಬಿಳಿ ಕೂದಲು, ಕುರುಚಲು ಗಡ್ಡ-ಮೀಸೆ ಬಿಟ್ಟಿರುತ್ತಾರೆ. ಸಿಮೆಂಟ್ ಬಣ್ಣದ ಜರ್ಕಿನ್, ಹಸಿರು ಬಣ್ಣದ ಸ್ವೆಟರ್, ಕಪ್ಪು ಬಣ್ಣದ ಪ್ಯಾಂಟ್, ಬಲಗೈಯಲ್ಲಿ ಕೆಂಪು ಬಣ್ಣದ ದಾರ, ಕಪ್ಪು- ಕಂದು ಬಣ್ಣದ ಪ್ಯಾರಾಗನ್ ಚಪ್ಪಲಿ ಧರಿಸಿದ್ದಾರೆ. ಮೃತರ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ.  
ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರ ರೈಲು ನಿಲ್ದಾಣದ ವಾಟರ್ ಟ್ಯಾಂಕ್ ಹತ್ತಿರ 55 ವರ್ಷದ ಅಪರಿಚಿತ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ, ಬೊಕ್ಕ ತಲೆಯಲ್ಲಿ ಒಂದೂವರೆ ಇಂಚು ಉದ್ದದ ಕಪ್ಪು-ಬಿಳಿ ಕೂದಲು, ಕುರುಚಲು ಗಡ್‌ಡ- ಮೀಸೆ ಬಿಟ್ಟಿರುತ್ತಾರೆ. ಮೃತರ ದೇಹವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ದೂ. 0821- 2516579 ಸಂಪರ್ಕಿಸಲು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.                 
'ಶಿಕ್ಷಣದಿಂದ ಸಮಗ್ರ ಪ್ರಗತಿ'
ಪಿರಿಯಾಪಟ್ಟಣ: ಶಿಕ್ಷಣ ಪ್ರತಿಯೊಬ್ಬರ ಜೀವನ ಹಾಗೂ ಬದುಕಿನ ನೆಮ್ಮದಿ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಕೆ. ಮಹೇಶ್ ಹೇಳಿದರು. ಪಟ್ಟಣದ ವಿಶ್ವಮಾನವ ವಿದ್ಯಾಸಂಸ್ಥೆಯ ಶಾರದಾ ಕಾನ್ವೆಂಟ್ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಅದರೊಂದಿಗೆ ಜೀವನದಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಂಡು ಬದುಕಬೇಕು ಆಗಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದರು.  ಸಂಸ್ಥೆಯ ಕಾರ್ಯದರ್ಶಿ ವಿಠಲಮೂರ್ತಿ, ಕರವೇ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಫಯಾಜ್, ಸಂಸ್ಥೆ ಅಧ್ಯಕ್ಷ ಗೋಪಾಲಗೌಡ, ಮುಖಂಡರಾದ ಕರಿಯಪ್ಪ, ಮಂಜುಳಾ, ಶಿಕ್ಷಕರಾದ ಗೀತಾ, ರಕ್ಷಿತಾ, ಅಲಿಯಾಫಿರ್ದೋಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement