ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಹಸೀಲ್ದಾರ್ ವಿರುದ್ಧ ಪ್ರತಿಭಟನೆ

Mainashree
Updated On : 5 Jan 2014, 11:09 am

ರಾಮನಾಥಪುರ: ಕೇರಳಾಪುರದಲ್ಲಿ ವಿಪರೀತವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ಹತ್ತಿಕ್ಕಲು ಅಸಮರ್ಥರಾಗಿರುವ ತಾಲ್ಲೂಕಿನ ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.  
ಆರೋಪ: ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಾತನಾಡಿ, ಮರಳು ತೆಗೆಯುವ ದುರಾಸೆಗೆ ಬಿದ್ದಿರುವ ಕೆಲವರು ಈಗ ಈ ಗ್ರಾಮದ ಸ್ಮಶಾನವನ್ನೂ ಬಿಡುತ್ತಿಲ್ಲ.  ಮರಳಿನಾಸೆಗಾಗಿ ಸ್ಮಶಾನದ ಸಮಯನ್ನೆಲ್ಲಾ ಅಗೆದು ಅದರಲ್ಲಿರುವ ಶವ ಮತ್ತು ಅವಶೇಷಗಳನ್ನು ಹೊರತೆಗೆದು ಹಾಕುತ್ತಾ ಜನರನ್ನು ಭಯಭೀತರನ್ನಾಗಿಸುತ್ತಿರುವುದಲ್ಲದೆ, ಇಂತಹ ಮರಳನ್ನು ಚೆನ್ನಾಗಿ ಜರಡಿ ಮಾಡಿ ಮನೆ ಕಟ್ಟಲು, ದೇವಾಲಯ, ಸಮುದಾಯ ಭವನ ಇನ್ನಿತರೆ ಕಾಮಗಾರಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  
ದೂರು: ಆದರೆ ಈ ಅಕ್ರಮ ಮರಳು ದಂಧೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇಂದು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸ್ಥಳೀಯ ತಹಶೀಲ್ದಾರ್ ಈ ವಿಚಾರದಲ್ಲಿ ನಿರ್ಲಿಪ್ತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅನುಮಾನ: ಮರಳು ಅಕ್ರಮಗಳ ಬಗ್ಗೆ ತಹಸೀಲ್ದಾರ್ ಅವರು ಗ್ರಾಮಸ್ಥರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಜಾತಕ ಪಕ್ಷಿಗಳಂತೆ ತಹಶೀಲ್ದಾರ್ ಅವರ ಬರುವಿಕೆಯನ್ನೇ ಎದುರು ನೋಡುತ್ತಿದ್ದಾರೆ. ಆದರೆ, ಬಸವನಹಳ್ಳಿ ಶಾಂತಿ ಸಭೆಗೆ ಆಗಮಿಸಿದ ತಹಸೀಲ್ದಾರ್ ಸಂಜೆ ಕೇರಳಾಪುರಕ್ಕೆ ಬಂದ ಕೂಡಲೆ ಇದ್ದಕ್ಕಿದ್ದಂತೆ ಸ್ಥಳಕ್ಕೆ ಬಾರದೆ ಹಿಂದಿರುಗಿದ್ದು ಅನುಮಾನ ವ್ಯಕ್ತವಾಗಿದೆ ಎಂದರು.  ಈ ವಿಚಾರವಾಗಿ, ಕರೆ ಮಾಡಿದರೆ ತಹಸೀಲ್ದಾರ್ ಕರೆ ಸ್ವೀಕರಿಸದೇ, ಆನಂತರ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದರಿಂದ ಅವರ ನಿರ್ಲಕ್ಷ್ಯತೆ ಎದ್ದು ಕಾಣುತ್ತದೆ ಎಂದು ಅವರು ಟೀಕಿಸಿದರು.  
ಜನಪರ ಹಿತಾಸಕ್ತಿ ಹೋರಾಟಗಾರ ಶ್ರೀನಿವಾಸ್ ಮಾತನಾಡಿ, ಎಷ್ಟು ದೊಡ್ಡ ಮಟ್ಟದಲ್ಲಿ ವಿದ್ಯಾರ್ಜನೆ ಮಾಡಿದರೇನು ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿ ತನ್ನ ವ್ಯಕ್ತಿತ್ವದ ಕೀಳು ಮಟ್ಟಕ್ಕೆ ಇದೊಂದು ನಿದರ್ಶನ ಎಂದು ಅವರು ದೂರಿದರು.  
ಪ್ರತಿಭಟನೆ: ಕೂಡಲೇ, ಈ ಅಧಿಕಾರಿಯನ್ನು ವರ್ಗಾಯಿಸಿ, ಸಂಬಂಧಿಸಿದ ಹಿರಿಯ ಅಧಿಕಾರಿಗಳು ಇಲ್ಲಿನ ಮರಳು ದಂಧೆಗೆ ಇತಿಶ್ರೀ ಹಾಕುವಂತೆ ಆಗ್ರಹಿಸಿ ಸ್ಥಳೀಯ ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.  ರಾಮು, ಯೋಗೇಶ್, ನಾರಾಯಣಿ, ಮಂಜು (ಮಾವ), ನಾಗೇಂದ್ರಕುಮಾರ್, ರಾಮು ಕೆ.ಜೆ., ಶ್ರೀನಿವಾಸ್, ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement