ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರದಲ್ಲಿ ಶೇ. 86.95 ಮತದಾನ

Mainashree
Updated On : 5 Jan 2014, 11:08 am

ಹೊಳೆನರಸೀಪುರ: ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಸ್ಥಾನಗಳ ಚುನಾವಣೆಗಾಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ನಡೆದ ಮತದಾನದಲ್ಲಿ ಶೇ. 86.95ರಷ್ಟು ಮತದಾನವಾಗಿದೆ.
ತಾಲೂಕಿನಲ್ಲಿರುವ ಒಟ್ಟು 1111 ಮತಗಳ ಪೈಕಿ 966ಮತಗಳು ಚಲಾವಣೆಯಾದವು. ತಾಲೂಕಿನ ಎರಡು ಮತಗಟ್ಟೆಗಳ ಪೈಕಿ ಒಂದನೇ ಮತಗಟ್ಟೆಯಲ್ಲಿ 546 ಮತಗಳ ಪೈಕಿ 492ಮತಗಳು ಚಲಾವಣೆಗೊಂಡರೆ, ಎರಡನೇ ಮತಗಟ್ಟೆಯಲ್ಲಿ 565 ಮತಗಳ ಪೈಕಿ 474ಮತಗಳು ಚಲಾವಣೆಗೊಂಡಿವೆ ಎಂದು ತಾಲೂಕಿನ ಚುನಾವಣೆಯ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ತಾಲೂಕಿನ ಮತಗಟ್ಟೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ಕಾಂಗ್ರೆಸ್ ನಾಯಕಿ ಅನುಪಮ, ಜಿಪಂ ಸದಸ್ಯ ಎಚ್.ಎನ್.ದೇವೇಗೌಡ, ತಾಪಂ ಸದಸ್ಯರಾದ ಕೆ.ಕೆ. ಲೋಕೇಶ್, ಎನ್.ಆರ್. ಅನಂತಕುಮಾರ್ ಮೊದಲಾದ ಗಣ್ಯರು ಮತದಾನ ಮಾಡಿದರು.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ ಹಾಗೂ ನಗರ ಠಾಣೆ ಎಸ್ಸೈ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement