ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಗವಿಕಲರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 6 Jan 2014, 9:29 am

ಕ.ಪ್ರ. ವಾರ್ತೆ  ಹಾಸನ ಜ. 6
ಅಂಗವಿಕಲರ ಗೌರವಧ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಅಂಗವಿಕಲರ ಅಭಿಮಾನಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಅಂಗವಿಕಲರ ಕುಂದುಕೊರತೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ನೇಮಿಸಿರುವ ನೌಕರರಿಗೆ ಗೌರವಧನ 5 ಸಾವಿರ ಸರ್ಕಾರದಿಂದ ಮಂಜೂರು ಮಾಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಇರುವ ಹಿರಿಯ ಅಂಗವಿಕಲರಿಗೆ ಸರ್ಕಾರದ ಸೌಲಭ್ಯವನ್ನು ತಿಳಿಸುವಂಥ ಕೆಲಸವನ್ನು ಅಂಗವಿಕಲರ ಪರಿಷತ್ ಮಾಡಿದೆ. ಉಚಿತವಾಗಿ ಬಸ್ಗಳಲ್ಲಿ ಹಾಗೂ ರೈಲುಗಳಲ್ಲಿ ಸಂಚರಿಸಲು ಪಾಸ್ ನೀಡಬೇಕು.
ಶ್ರವಣದೋಷ ಇರುವ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಟಿಫಿಕೆಟ್ ನೀಡಿ ಅಂಗವಿಕಲರ ವೇತನ ಮಂಜೂರಾತಿಗೆ ಅನುಮತಿ ನೀಡಬೇಕು, ಪ್ರತಿ ಪಂಚಾಯ್ತಿಯಲ್ಲಿ ಅಂಗವಿಕಲರಿಗೆ ಒಟ್ಟು ಶೇ.3ರಷ್ಟು ಹಣ ಕಡ್ಡಾಯವಾಗಿ ಮೀಸಲು ಇಟ್ಟು ಆರೋಗ್ಯ ಮತ್ತು ವೈದ್ಯಕೀಯ ಖರ್ಚಿಗಾಗಿ ಇತ್ಯಾದಿಗಳಿಗೆ ಕಡ್ಡಾಯವಾಗಿ ಖರ್ಚು ಮಾಡಬೇಕು. ಜತೆಗೆ ಮಾಶಾಸನ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ನಾನಾ ಯೋಜನೆಗಳು ಜಾರಿಯಾಗಿದ್ದರೂ ಸಮರ್ಪಕವಾಗಿ ಅಂಗವಿಕಲರಿಗೆ ಲಭ್ಯವಾಗುತ್ತಿಲ್ಲ. ಶೇ.40ರಷ್ಟು ಇರುವ ಅಂಗವಿಕಲರಿಗೂ 3 ಸಾವಿರ ಮಾಶಾಸನ ನೀಡಬೇಕು.
ಅಂಗವಿಕಲರಿಗೆ ಉಚಿತವಾಗಿ 30 ಕೆಜಿ ಅಕ್ಕಿ ನೀಡಬೇಕು. ಅಂಗವಿಕಲರಿಗೆ ಪ್ರತ್ಯೇಕವಾಗಿ ನಿಗಮ ಸ್ಥಾಪಿಸಿ ನಿಗಮದ ಮೂಲಕ ಸಾಲ ಸಹಾಯಧನ ನೀಡಬೇಕು. ಅಂಗವಿಕಲರಿಗೆ ಸರ್ಕಾರಿ ಸವಲತ್ತನ್ನು ಪಡೆಯುವಾಗ ಆದಾಯದ ಮಿತಿಯನ್ನು ಕೈಬಿಡಬೇಕು.
ಸರ್ಕಾರದಿಂದ ಹಿರಿಯ ನಾಗರಿಕ 60 ವರ್ಷದ ಮಿತಿಯನ್ನು ಮಾಶಾಸನ 500 ನೀಡಬೇಕು. ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ಮಾಡುವವರ ಮೇಲೆ ಕಾನೂನು ಕಾಯ್ದೆಯಡಿ ಕೇಸ್ ದಾಖಲಿಸಬೇಕು. ಅಂಗವಿಕಲರಿಗೆ ಸರ್ಕಾರದಿಂದ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಪ್ರವಾಸ ಮಾಡಿ ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಲು ಉಚಿತ ಪ್ರವಾಸವನ್ನು ಸರ್ಕಾರಕ್ಕೆ ವಹಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೂ 4 ಸೀಟ್ ಕಡ್ಡಾಯವಾಗಿ ನೀಡಬೇಕು. ನಿರ್ವಾಹಕರು ಇದನ್ನು ಸಹಕರಿಸುವಂತೆ ಆದೇಶಿಸಬೇಕು.
ಅಂಗವಿಕಲರಿಗೆ ನೀಡಿರುವ ರಿಯಾಯತಿ ಬಸ್ ಪಾಸಿನ ಕಿಮೀ ಮಿತಿಯನ್ನು ರದ್ದುಪಡಿಸಿ ಉಚಿತ ಬಸ್ ಪಾಸ್ನ್ನು ಕಡ್ಡಾಯವನ್ನು ನೀಡಬೇಕು. ಹಾಸನ ಜಿಲ್ಲಾ ಕೇಂದ್ರದಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗಗೆ ವಸತಿ ಶಾಲೆ ಪ್ರಾರಂಭಸಿಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಅಭಿಮಾನಿ ಪರಿಷತ್ ಜಿಲ್ಲಾಧ್ಯಕ್ಷ ಕೆ.ಗೋಪಾಲಾಚಾರ್, ಕಾರ್ಯದರ್ಶಿ ಪಿ.ಎಸ್. ನಾಗರಾಜ್, ಖಜಾಂಚಿ ಹುಲೀಯಯ್ಯ (ಮುತ್ತಯ್ಯ), ಹಿಂದುಳಿದ ವರ್ಗಗಳ ಶಂಕರಾಚಾರ್, ಚಿಕ್ಕೇಗೌಡ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement