ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಿ: ದಿನೇಶ್

Mainashree
Updated On : 6 Jan 2014, 9:27 am

ಕ.ಪ್ರ. ವಾರ್ತೆ  ಅರಸೀಕೆರೆ ಜ. 6
ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸ್ವಯಂ ಸೇವಾ ಸಂಘ, ಸಂಸ್ಥೆಗಳು ಯಾವುದೇ ಅಪೇಕ್ಷೆಯಿಲ್ಲದೇ ಉಚಿತ ಶಿಬಿರಗಳನ್ನು ನಡೆಸುತ್ತಿವೆ. ಅವುಗಳ ಸದುಪಯೋಗವನ್ನು ಅವಶ್ಯಕ ಫಲಾನುಭವಿಗಳು ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ದಿನೇಶ್ ತಿಳಿಸಿದರು.
ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಮತ್ತು ಚಿರಂತನ ಟ್ರಸ್ಟ್, ಸ್ಥಳೀಯ ರೋಟರಿ ಕ್ಲಬಾ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರ ಉಚಿತ ಶಸ್ತ್ರಚಿಕಿತ್ಸಾ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸೂಕ್ತ ಸಮಯದಲ್ಲಿ ಅವಶ್ಯಕವಾದ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರೊಂದಿಗೆ ಅನೇಕ ಸ್ವಯಂ ಸೇವಾ ಸಂಘ ಸಂಸ್ಥೆಗಳು ಕೂಡ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸ್ಥಳೀಯ ಸಾರ್ವಜನಿಕರ ಸಹಕಾರ ಪಡೆದು ವಿವಿಧ ರೀತಿಯ ಆರೋಗ್ಯ ತಪಾಸಣೆ ಶಿಬಿರಗಳನ್ನು ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಸಂಘಟಿಸಿ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಸಂತಸ ಸಂಗತಿಯಾಗಿದೆ ಎಂದರು.
ಸಮಾಜದ ನಡುವೆ ಸೀಳು ತುಟಿ ಮತ್ತು ಸೀಳು ಅಂಗಳ ಹೊಂದಿರುವ ವ್ಯಕ್ತಿಗಳನ್ನು ಜನರು ಹೇಗೆ ಕಾಣುತ್ತಾರೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಂಥ ವ್ಯಕ್ತಿಗಳಿಗೆ ತಮ್ಮ ಮುಖ ಎಲ್ಲರಂತೆ ನೋಡಲು ಅಂದವಾಗುತ್ತದೆ ಎಂದರೆ ಸಂತೋಷ ಅಲ್ಲವೇ? ಅಂಥ ಕಾರ್ಯಕ್ಕೆ ಮುಂದಾಗಿರುವ ಸ್ವಯಂ ಸೇವಾ ಸಂಘಗಳ ಸೇವೆಯನ್ನು ಆರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.  ಚಿರಂತನ ಟ್ರಸ್ಟ್ ಮುಖ್ಯಸ್ಥ ಎನ್.ಎಸ್.ರಂಗಪ್ಪ ಮಾತನಾಡಿ, ನಮ್ಮ ಸ್ವಯಂಸೇವಾ ಟ್ರಸ್ಟ್ ಮೂಲ ಉದ್ದೇಶವೇ ಸೀಳು ತುಟಿಗಳ ಮುಕ್ತ ನಗರ ಗುರಿ. 2006ರಿಂದ ದೇಶದ ಕರ್ನಾಟಕ, ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ ಸೇರಿದಂತೆ 5 ರಾಜ್ಯಗಳಲ್ಲಿ ಈ ಸೇವಾ ಚಟುವಟಿಕೆ ನಡೆಸುತ್ತಿದೆ. ಕರ್ನಾಟಕದಲ್ಲಿ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ಮೂಲಕ ತನ್ನ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರತಿವರ್ಷ 500ಕ್ಕೂ ಹೆಚ್ಚಿನ ಮಂದಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ್ಕುಮಾರ್, ಮಾಜಿ ಅಧ್ಯಕ್ಷ ಯೋಗೀಶಾಚಾರ್, ತಾಲೂಕು ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷ ಎನ್.ಜಿ.ಮಧು ಮಾತನಾಡಿದರು. ಅರವಳಿಕೆ ತಜ್ಞ ಡಾ.ಚಕ್ರಪಾಣಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಒಟ್ಟು 20 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಅವರಲ್ಲಿ 3 ಮಕ್ಕಳು ಹಾಗೂ 9 ಮಂದಿಯನ್ನು ಸೂಕ್ತ ಶಸ್ತ್ರಚಿಕಿತ್ಸೆಗಾಗಿ ಆಯ್ಕೆ ಮಾಡಲಾಗಿದ್ದು, ಈ ತಿಂಗಳ ಕೊನೆಯ ಹಂತದಲ್ಲಿ ಇವರಿಗೆ ಉಚಿತ ಸೀಳು ತುಟಿಯ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಭಗವಾನ್ ಮಹಾವೀರ ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ಚಿರಂತನ ಟ್ರಸ್ಟ್ನ ಮುಖ್ಯಸ್ಥ ಎನ್.ಎಸ್.ರಂಗಪ್ಪ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement