ಉತ್ತಮ ರಾಗಿ ತಳಿಯಿಂದ ಹೆಚ್ಚಿನ ಇಳುವರಿ: ಪ್ರಸಾದ್
ಹಾಸನ: ರೈತರು ರಾಗಿ ಬೇಸಾಯದಲ್ಲಿ ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು ಸಮಗ್ರ ಬೆಳೆ ನಿರ್ವಹಣೆ ಕ್ರಮ ಅಳವಡಿಸಿಕೊಂಡರೆ ಹೆಚ್ಚು ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರವು ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಗಿಯ ಸಮಗ್ರ ಬೆಳೆ ನಿರ್ವಹಣೆ ಕುರಿತು ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರ ರೈತರ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೃಷಿ ವಿಜ್ಞಾನ ಕೇಂದ್ರವು ಕೆಎಂಆರ್-301 ತಳಿಯನ್ನು ಪ್ರಾತ್ಯಕ್ಷಿಕೆ ಮುಖಾಂತರ ರೈತರಿಗೆ ಮನವರಿಕೆ ಮಾಡುವ ಸಲುವಾಗಿಯೇ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮಣ್ಣು ವಿಜ್ಞಾನಿ ಡಾ.ಎಸ್. ಚನ್ನಕೇಶವ, ಕೃಷಿ ತಾಂತ್ರಿಕತೆ ವಿಜ್ಞಾನಿ ಡಾ.ಜಿ.ಎಸ್. ಕೃಷ್ಣಾರೆಡ್ಡಿ ಮಾತನಾಡಿದರು. ಶೆಟ್ಟಿಗೆರೆ ಗ್ರಾಮದ ರೈತ ಕೆಂಚಯ್ಯ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಎಸ್.ಡಿ. ರವಿಕುಮಾರ್ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಡಾ ಕೆ.ಜೆ.ಕಾಂತರಾಜು ನಿರೂಪಿಸಿದರು. ಡಾ.ಟಿ.ಎಸ್.ಮಂಜುನಾಥಸ್ವಾಮಿ ವಂದಿಸಿದರು.