ರಕ್ತದ ಗುಂಪು ಪರೀಕ್ಷೆ ಅವಶ್ಯಕ: ಸ್ವಾಮಿಗೌಡ
ಅರಕಲಗೂಡು: ತುರ್ತು ಸಂದರ್ಭಗಳಲ್ಲಿ ಅಪಘಾತಕ್ಕೀಡಾದಾಗ ಅಥವಾ ತೊಂದರೆಗೊಳಗಾದವರಿಗೆ ರಕ್ತ ನೀಡಬೇಕಾದರೆ ರಕ್ತದ ಗುಂಪನ್ನು ತಿಳಿದುಕೊಂಡಿರುವುದು ಅತ್ಯವಶ್ಯಕ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ಸ್ವಾಮಿಗೌಡ ತಿಳಿಸಿದರು.
ಪಟ್ಟಣದ ಸರ್ಕಾರಿ ಐಟಿಐನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಸರ್ಕಾರಿ ಐಟಿಐ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಕ್ತದ ಗುಂಪು ಪರೀಕ್ಷೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದ ಅಧ್ಯಕ್ಷತೆಯನ್ನು ಸಂಸ್ಥೆಯ ತರಬೇತಿ ಅಧಿಕಾರಿ ಜಯರಾಂ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಯೋಗನಾಥ್ ಶಿಬಿರವನ್ನು ಆಯೋಜಿಸಿದ್ದು, ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಪುಷ್ಪಲತಾ ವಂದಿಸಿದರು. ತರಬೇತಿದಾರ ರಜನಿಕಾಂತ ಕಾರ್ಯಕ್ರಮವನ್ನು ನಿರೂಪಿಸಿದರು.