ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಮ್ಮೇಳನಕ್ಕೆ ಬಸ್ ವ್ಯವಸ್ಥೆ ಇಲ್ಲದೇ ಪರದಾಟ

Vishwanath S
Updated On : 8 Jan 2014, 12:50 pm

ಕ.ಪ್ರ.ವಾರ್ತೆ ,  ಹಾಸನ ,  ಜ 7
ಮಡಿಕೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿ ತೆರಳು ಸೂಕ್ತ ಸಾರಿಗೆ ವ್ಯವಸ್ಥೆ ಲಭ್ಯವಾಗದ ಕಾರಣ ಕನ್ನಡಾಭಿಮಾನಿಗಳು ಸಾರಿಗೆ ಸಂಸ್ಥೆಯ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೈಟೆಕ್ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಮಡಿಕೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳು ಬಸ್‌ಗಳ ವ್ಯವಸ್ಥೆ ಕಡಿಮೆ ಇದ್ದ ಪರಿಣಾಮ, ಸಮ್ಮೇಳನಕ್ಕೆ ಹೋಗಬೇಕಿದ್ದ ಪ್ರತಿಯೊಂದ ಬಸ್‌ಗೂ ಸುಮಾರು ಒಂದು  ತಾಸಿಗೂ ಹೆಚ್ಚು ಹೊತ್ತು ಕಾಯಬೇಕಾಯಿತು. ಇದರಿಂದ ರೊಚ್ಚಿಗೆದ್ದ ಕನ್ನಡಾಭಿಮಾನಿಗಳು ಸಾರಿಗೆ ಅವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿದರು. ಆದರೆ, ಇತರ ಪ್ರಯಾಣಿಕರಂತೂ ಪರದಾಡುವಂತಾಗಿತ್ತು.
ಸ್ಪಷ್ಟನೆ: ಬಸ್ ಬಾರದ ಕಾರಣ, ಈ ಬಗ್ಗೆ ವಿಚಾರಿಸಲು ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಬಳಿ ತೆರಳಿದಾಗ ಬಸ್ ಇರುವಷ್ಟನ್ನು ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಪ್ರಯಾಣಿಕರು ಸಹಕರಿಸುವಂತೆ ಅವರು ಹೇಳಿದರು. ಆದರೂ, ಪಟ್ಟುಬಿಡದ ಪ್ರಯಾಣಿಕರು, ವಿಶೇಷ ಸಂದರ್ಭಗಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿ, ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು ಎಂದು ಆಗ್ರಹಿಸಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದರೂ, ಹಾಸನದಲ್ಲಿ ಆ ವ್ಯವಸ್ಥೆ ಇಲ್ಲವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಸಮ್ಮೇಳನಕ್ಕಾಗಿ ನಿಯೋಜಿಸಿರುವ ಬಸ್‌ಗಳ ಮೇಲೆ ಬ್ಯಾನರ್ ಇಲ್ಲವೇ ಇಲ್ಲ. ಇದು ಮತ್ತೊಂದು ಅನಾನುಕೂಲ ಕಲ್ಪಿಸಿದೆ ಎಂದ ಪ್ರಯಾಣಿಕರು, ಈ ಬಗ್ಗೆ ಕೂಡಲೇ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಹೆಚ್ಚುವರಿ ಬಸ್‌ಗಳನ್ನು ಮಡಿಕೇರಿಗೆ ಒದಗಿಸುವಂತೆ ಪ್ರಯಾಣಿಕರು ಪಟ್ಟು ಹಿಡಿದ ಪರಿಣಾಮ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement