ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರೋಪಕಾರ ಗುಣವಿದ್ದರೆ ಬದುಕು ಅರ್ಥಪೂರ್ಣ

Vishwanath S
Updated On : 9 Jan 2014, 1:14 am

ಕ.ಪ್ರ.ವಾರ್ತೆ ,  ಅರಸೀಕೆರೆ ,  ಜ. 8
ಮನುಷ್ಯ ಏನೆಲ್ಲಾ ಕಂಡುಹಿಡಿದರೂ, ಎಷ್ಟೇ ಹಣ ಸಂಪತ್ತನ್ನು ಗಳಿಸಿದರೂ ಅವನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ.
ಪರೋಪಕಾರ, ಸಹನೆ, ತಾಳ್ಮೆ, ಸೌಹಾರ್ಧಯುತ ಜೀವನ ನಡೆಸುವ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅರ್ಥಪೂರ್ಣ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೊಮ್ಮಸಮುದ್ರ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸರ್ವ ಶರಣರ ಸಮ್ಮೇಳನ ಹಾಗೂ ಸಮಾಜ ಸೇವಕ ಮಹಾದೇವಪ್ಪನವರ ಆಯೋಜಿಸಿದ್ದ ಪುಣ್ಯ ಸಂಸ್ಮರಣೆ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು,  ಕೇವಲ ಸ್ವಾರ್ಥಕ್ಕಾಗಿ ಜೀವನ ನಡೆಸದೇ ತಾನು ಬೆಳೆಯುತ್ತಾ ಇತರರ ಬೆಳವಣಿಗೆಗೂ ಅವಕಾಶ ನೀಡಿದಾಗ ಬದುಕಿದ್ದು ಸಾರ್ಥಕ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚಿಸಬೇಕೆಂದು ಕಿವಿಮಾತು ಹೇಳಿದರು.
ಮಾಡಾಳು ಮಠದ ರುದ್ರಮುನಿ  ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಸ್.ಸಿ. ಸಿದ್ದರಾಮಪ್ಪ ಮಾತನಾಡಿ, ವೇದಿಕೆಯಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯ್ ಕುಮಾರ್, ಶಿವಮೂರ್ತಿ, ತಾಪಂ ಸದಸ್ಯ ಕೆ.ಎಂ.ನಂಜುಂಡಪ್ಪ, ಎಂ.ಬಿ. ಮಲ್ಲಿಕಾರ್ಜುನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement