ಮತದಾನ ಕೇಂದ್ರಗಳ ಅಂತಿಮ ಪ್ರಕಟಣೆ
ಹಾಸನ: ಜಿಲ್ಲೆಗೆ ಸಂಬಂಧಿಸಿದ 193- ಶ್ರವಣಬೆಳಗೊಳ, 194- ಅರಸೀಕೆರೆ, 195- ಬೇಲೂರು, 196- ಹಾಸನ, 197- ಹೊಳೆನರಸೀಪುರ, 198- ಅರಕಲಗೂಡು ಮತ್ತು 199- ಸಕಲೇಶಪುರ ವಿಧಾನಸಭಾ ಕ್ಷೇತ್ರಗಳ ಮತದಾನ ಕೇಂದ್ರಗಳ ಅಂತಿಮ ಪಟ್ಟಿಯನ್ನು ನಿಗದಿಪಡಿಸಿದ ಪ್ರಪತ್ರದಲ್ಲಿ (ಪ್ರಜಾ ಪ್ರಾತಿನಿಧ್ಯ ಕಾಯ್ದೆ- 1951 ರ ಸೆಕ್ಷನ್ 25ರನ್ವಯ ಹಾಗೂ ಚುನಾವಣಾಧಿಕಾರಿಗಳ ಕೈಪಿಡಿ 2012 ರ ಅನೆಕ್ಷರ್ ಐರನ್ವಯ) ಸಾರ್ವಜನಿಕರ ತಿಳಿವಳಿಕೆಗಾಗಿ ಪ್ರಚುರ ಪಡಿಸಲಾಗಿದೆ.
ಈ ರೀತಿ ಪ್ರಚುರಪಡಿಸಲಾದ ಅಂತಿಮ ಮತದಾನ ಕೇಂದ್ರಗಳ ಪಟ್ಟಿಯ ಕುರಿತಂತೆ ಯಾವುದಾದರೂ ಆಕ್ಷೇಪಣೆಗಳು ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಅದನ್ನು ಲಿಖಿತವಾಗಿ ಖುದ್ದಾಗಿ ಈ ಕಚೇರಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳು ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಮುನ್ಸಿಪಾಲಿಟಿ ಕಚೇರಿಗಳಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.
ಇಂದು ಪ್ರಗತಿ ಪರಿಶೀಲನಾ ಸಭೆ
ಹಾಸನ: ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭೆ ಸದಸ್ಯ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಜ. 9ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ನಡೆಯಲಿದೆ.
ಕೇಂದ್ರ ಪುರಸ್ಕೃತ ನಾನಾ ಯೋಜನೆ, ರಾಜ್ಯ ಜಿಲ್ಲಾ ವಲಯ ಯೋಜನೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಮಧ್ಯಾಹ್ನ 3.30ಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬ್ಯಾಂಕ್ ಮೂಲಕ ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಅನುಷ್ಠಾನ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹಾಗೂ ಐ.ಎ.ಎಸ್. ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾಗದ ಅಭ್ಯರ್ಥಿಗಳನ್ನು, ಅವರು ಗಳಿಸಿದ ಅಂಕಗಳು ಹಾಗೂ ಪ್ರವರ್ಗವಾರು ಮೀಸಲಾತಿಯನ್ನು ಫೆ. 1ರಿಂದ ಪ್ರಾರಂಭವಾಗುವ ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿಗೆ, ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿ ವಿವಿಧ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಲಾಗುವುದು. ಹೆಚ್ಚಿನ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ಢಿಢಿಢಿ.ಛಿಛ್ಛ್ಞಢಿಛ್ಠಜ್ಛಟಛಡಡಜಡ.್ಞಛ್ಠ.ಟ್ಝ್ಛಿ.್ಝಟಿ ಇಲ್ಲಿ ಪಡೆಯಬಹುದು ಎಂದು ಬೆಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ನೋಂದಣಿಗೆ ಆಹ್ವಾನ
ಹಾಸನ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಂಗೀತ ಮತ್ತು ನಾಟಕ ವಿಭಾಗಕ್ಕೆ ನೋಂದಣಿ ಮಾಡಿಸಲು ಅರ್ಹ ಕಲಾವಿದರ ತಂಡಗಳನ್ನು ಆಹ್ವಾನಿಸಿದೆ. ಅರ್ಹ ಕಲಾವಿದರ ತಂಡಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಜ.21ರೊಳಗೆ ಉಪ ನಿರ್ದೇಶಕರು, ಸಂಗೀತ ಮತ್ತು ನಾಟಕ ವಿಭಾಗ, ಕೇಂದ್ರೀಯ ಸದನ, ಎ- ವಿಂಗ್, ನೆಲ ಮಾಳಿಗೆ, ಜಿಪಿಒಎ, 17ನೇ ಮುಖ್ಯ ರಸ್ತೆ, ಎರಡನೇ ಹಂತ, ಕೋರಮಂಗಲ, ಬೆಂಗಳೂರು- 560034. ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.ಡಜಜ.ಟ್ಝ್ಛಿ.್ಝಟಿ ಹಾಗೂ ದೂರವಾಣಿ ಸಂಖ್ಯೆ 080-25537993 / 25502164 ಸಂಪರ್ಕಿಸಿ ಪಡೆಯಬಹುದಾಗಿದೆ.
10ರಂದು ಭವಿಷ್ಯನಿಧಿ ಅದಾಲತ್
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಶ್ರಮ ಮಂತ್ರಾಲಯ, ಭಾರತ ಸರಕಾರವು ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಯಶೋರಾಮ್ ಚೇಂಬರ್ಸ್, ರತ್ನಗಿರಿ ರಸ್ತೆ, ಚಿಕ್ಕಮಗಳೂರಿನಲ್ಲಿ ಹೊಂದಿದೆ. ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಜ. 10ರಂದು ಭವಿಷ್ಯನಿಧಿ ಅದಾಲತ್ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ತಮ್ಮ ಅರ್ಜಿಯನ್ನು ಖುದ್ದಾಗಿ ಜ. 10ರಂದು ಬೆಳಗ್ಗೆ 11ಕ್ಕೆ ಅಥವಾ ಜ. 9 ರೊಳಗೆ ಅಂಚೆಯ ಮೂಲಕ ನೋಂದಾಯಿಸಲು ಕೋರಿದ್ದಾರೆ. ಸದಸ್ಯರು ಹಾಗೂ ಉದ್ಯೋಗದಾತರು ಢಿಢಿಢಿ.ಜಠಜ್ಝ್ಜಿಟಡ.್ಜ್ಟಢ.್ಝಟಿ ಇಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಎಂದು ಚಿಕ್ಕಮಗಳೂರು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತೆ ಪ್ರಭಾವತಿ ಬಿ.ಜೋಶಿ ತಿಳಿಸಿದ್ದಾರೆ. ದೂ. 08262-234106, ಫ್ಯಾಕ್ಸ್. 08262-237426, ಇ-ಮೇಲ್: ಡ್ಠ್ಟ.ಝಛ್ಝ್ಞಛಟಛ್ಜಛಟ್ಡ್ಠಣಜಠಜ್ಝಿಟಿಜ್ಝಛ.್ಜ್ಟಢ.್ಝಟಿ
ವನಜಾಕ್ಷಿ ರಂಗೇಗೌಡ ಆಯ್ಕೆ
ಹೊಳೆನರಸೀಪುರ: ರಾಜೀವ್ ಗಾಂಧಿ ಪಂಚಾಯತ್ ರಾಜ್ ರಾಜ್ಯ ಸಂಘಟನೆಯ ಹೊಳೆನರಸೀಪುರ ಪಟ್ಟಣದ ಬ್ಲಾಕ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾಗಿ ಕಾಂಗ್ರೆಸ್ನ ವನಜಾಕ್ಷಿ ರಂಗೇಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸಿ.ವಿ. ರಾಜಪ್ಪ ತಿಳಿಸಿದ್ದಾರೆ.
ವನಜಾಕ್ಷಿರಂಗೇಗೌಡ ಅವರಿಗೆ ಈ ಕುರಿತಂತೆ ಪತ್ರ ಬರೆದಿರುವ ರಾಜಪ್ಪ ಅವರು ಮುಂದಿನ ದಿನಗಳಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಸಂಘಟನೆಯನ್ನು ಆರಂಭಿಸಿ ಪಕ್ಷದ ಬಲವರ್ಧನೆಗೆ ಮುಂದಾಗಬೇಕೆಂದು ಸೂಚಿಸಿರುವುದಾಗಿ ವರದಿಯಾಗಿದೆ.